ಬೆಳೆಗಾರರ ಸಮಾವೇಶ

Updated on: 

ಚಿತ್ತಾಪುರ: ಆಗಸ್ಟ್ ಮೊದಲ ವಾರದಲ್ಲಿ ತಾಲೂಕು ಮಟ್ಟದ ತೊಗರಿ ಬೆಳೆಗಾರರ ಸಮಾವೇಶ ಹಮ್ಮಿಕೊಳ್ಳಲು  ನಿರ್ಧರಿಸಲಾಗಿದೆ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಚಂದ್ರಶೇಖರಡ್ಡಿ ಹೇಳಿದರು.  ಸದಸ್ಯರ ಸಲಹೆ ಮೇರೆಗೆ ಪ್ರತಿ ಹೋಬಳಿಯಿಂದ 3 ಪ್ರಗತಿಪರ ರೈತರಿಗೆ ಸನ್ಮಾನಿಸಲಾಗುವುದು. ಸಭೆಯಲ್ಲಿ ತಾಲೂಕಿನ ಮಳೆಯ ಪ್ರಮಾಣ, ಬೀಜ, ಗೊಬ್ಬರ ವಿತರಣೆ ಬಗ್ಗೆ ಹಾಗೂ ಸಾವಯುವ ಭಾಗ್ಯ ಯೋಜನೆಗೆ ಆಯ್ಕೆಯಾದ ಹಳ್ಳಿಗಳ ಹಾಗೂ ಯೋಜನೆಯ ಉದ್ದೇಶ ಕುರಿತು ಚರ್ಚಿಸಲಾಗುವುದು ಎಂದರು. ಸಭೆಯಲ್ಲಿ ಕೃಷಿಕ ಸಮಾಜದ ಸದಸ್ಯ ಶಿವಶರಣಪ್ಪ ಉಟಗೂರ, ಶರಣಗೌಡ ಗೋಳಾ, ಶಿವಪ್ರಸಾದ, ಶರಣಗೌಡ ಪೇಠಶಿರೂರ, ಚಂದ್ರಕಾಂತ ನಾಗಶೆಟ್ಟಿ, ರವಿಂದ್ರ ಬೈನರ್ ಅಲ್ಲೂರ, ಅನೇಕ ಸದಸ್ಯರು ಭಾಗವಹಿಸಿದ್ದರು.
ಆ.5 ರಿಂದ ಕ್ರೀಡಾಕೂಟ
ಶಹಾಬಾದ್: 2014-15 ನೇ ಸಾಲಿನ ಶಹಾಬಾದ್ ಹೋಬಳಿ ಮಟ್ಟದ ಪ್ರಾಥಮಿಕ, ಗ್ರಾಮೀಣ, ಪ್ರೌಢಶಾಲೆಗಳ ಕ್ರೀಡಾಕೂಟ ಆಗಸ್ಟ್ 5 ರಿಂದ 12ವರೆಗೆ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು, ದೈಹಿಕ ಶಿಕ್ಷಣಾಧಿಕಾರಿ ಹಾಗೂ ಹೋಬಳಿ ಮಟ್ಟದ ಕ್ರೀಡಾಕೂಟದ ಸಂಘಟಕ ಎನ್. ಬನ್ನಪ್ಪ ಜಂಟಿಯಾಗಿ ತಿಳಿಸಿದ್ದಾರೆ.  ಇಲ್ಲಿಯ ಬಾಲ ವಿದ್ಯಾಮಂದಿರ ಶಾಲೆಯ ರೇಲ್ವೆ ಮೈದಾನದಲ್ಲಿ ನಡೆಯಲಿದ್ದು, ಆಗಸ್ಟ್ 5 ಮತ್ತು 6 ರಂದು ನಗರ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ, ಆಗಸ್ಟ್ 7 ಮತ್ತು 8 ರಂದು ಶಹಾಬಾದ್ ಗ್ರಾಮೀಣ ಪ್ರಾಥಮಿಕ ಶಾಲೆಗಳಿಗೆ ಕ್ರೀಡಾಕೂಟ, ಆಗಸ್ಟ್ 11 ಮತ್ತು12 ರಂದು ಹೋಬಳಿ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ನಡೆಯಲಿವೆ ಎಂದು ತಿಳಿಸಿದ್ದಾರೆ. ಹೆಚ್ಚಿನ ವಿವರಕ್ಕಾಗಿ ಎನ್. ಬನ್ನಪ್ಪ ಮೊ. 9449124093 ಗೆ ಸಂಪರ್ಕಿಸಲು  ಕೋರಲಾಗಿದೆ.
ಆನ್ಲೈನ್ ಅರ್ಜಿ
ಗುಲ್ಬರ್ಗ: ಗುಲ್ಬರ್ಗ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಮತ್ತು ಸಹ ಶಿಕ್ಷಕಿ ವೃಂದದ ಮೂರು (3) ಹುದ್ದೆಗಳಿಗೆ ಅಂಧ ಮತ್ತು ಮಂದ ದೃಷ್ಟಿಯ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳ ವಿಶೇಷ ನೇರ ನೇಮಕಾತಿಗಾಗಿ ಜಿಲ್ಲಾ ಮಟ್ಟದ (ಸಂಯುಕ್ತ ಸ್ಪರ್ಧಾತ್ಮಕ) ಪರೀಕ್ಷೆಯ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು. ಅರ್ಜಿಯನ್ನು ಆಗಸ್ಟ್ 5 ರವರೆಗೆ ಆನ್ಲೈನ್ ಮೂಲಕ ಸಲ್ಲಿಸಬೇಕು. ನೇಮಕಾತಿ ಅಧಿಸೂಚನೆಯನ್ನು ಕಚೇರಿಯ ಸೂಚನಾ ಫಲಕದಲ್ಲಿ ಹಾಗೂ ಅಂತರ್ಜಾಲ ವಿಳಾಸ ಢಿಢಿಢಿ.ಝ್ಛ್ಟ್ಟಟಜಜ್ಡ್ಛಛಡ್ಝ್ಟಿಟಿ.್ಞಛ್ಠ.ಟ್ಝ್ಛಿ.್ಝಟಿ  ಠಡಡ್ಠಿ.್ಛಛ್ಛ್ಟಟಿಟ್ಝಟಿಜ.್ಝಟಿ/ಠಜಜಿ/473್ಜ್ಡಟಛಿಛ್ಠ್ಜಛ.ಠಜಜಿರಲ್ಲಿ ಪ್ರಕಟಿಸಲಾಗಿದೆ ಎಂದು ಗುಲ್ಬರ್ಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ಗುಲ್ಬರ್ಗ: ಗುಲ್ಬರ್ಗ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ 2014-15ನೇ ಸಾಲಿಗೆ ಉದ್ಯೋಗಿನಿ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಕಡುಬಡವರು, ಸಂಕಷ್ಟ ಪರಿಸ್ಥಿತಿ, ಅಂಗವಿಕಲ ಮಹಿಳೆ ಮತ್ತು ವಿಧವೆಯರು ಅರ್ಜಿ ಸಲ್ಲಿಸಲು ಅರ್ಹರು. ಅಭ್ಯರ್ಥಿಯು 18 ರಿಂದ 45 ವಯಸ್ಸಿನೊಳಗಿರಬೇಕು. ವಾರ್ಷಿಕ ಆದಾಯ 40000 ಮೀರಿರಬಾರದು. ಅರ್ಜಿಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಪಡೆದು, ಅದೇ ಕಚೇರಿಯಲ್ಲಿ ಆಗಸ್ಟ್ 14 ರೊಳಗೆ ಸಲ್ಲಿಸಬೇಕು. ಮಾಹಿತಿಗೆ ಮೇಲಿನ ಕಚೇರಿಯನ್ನು ಸಂಪರ್ಕಿಸಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com