ರಾಯಚೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಬೆಂಗಳೂರಿನ ಪದ್ಮನಾಭ ನಗರದಲ್ಲಿ ಮಹಿಳಾ ವಸತಿ ನಿಲಯಕ್ಕೆ ಆದ್ಯತೆ ಮೇರೆಗೆ ಪ್ರವೇಶ ನೀಡಲಾಗುತ್ತಿದೆ ಎಂದು ಮಹಾಸಭಾದ ಕಾರ್ಯದರ್ಶಿ ಪ್ರಾಣೇಶ್ ಮುತಾಲಿಕ್ ತಿಳಿಸಿದ್ದಾರೆ. ಬೆಂಗಳೂರಿನ ನಿವಾಸಿಗಳನ್ನು ಹೊರತುಪಡಿಸಿ ರಾಜ್ಯದ ಇನ್ನುಳಿದ ಎಲ್ಲ ಜಿಲ್ಲೆಗಳ ವಿದ್ಯಾರ್ಥಿನಿಯರು ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ವಸತಿ ಸೌಲಭ್ಯ ಇಲ್ಲಿ ಕಲ್ಪಿಸಲಾಗುತ್ತಿದೆ. ಜಿಲ್ಲೆಯ ಆಸಕ್ತರು ವಸತಿ ನಿಲಯದಲ್ಲಿ ಪ್ರವೇಶ ಪಡೆಯಲು ಬಯಸಿದಲ್ಲಿ ರಾಯಚೂರಿನ ಮಹಾಸಭಾದಿಂದ ಅನುಮೋದನೆ ಪಡೆದು ವಸತಿ ಸೌಲಭ್ಯದ ಪ್ರಯೋಜನ ಪಡೆಯಬಹುದೆಂದು ತಿಳಿಸಿದ್ದಾರೆ. ಮಾಸಿಕ ಕನಿಷ್ಠ ವಂತಿಗೆ ಪಾವತಿಯೊಂದಿಗೆ ಈ ವಸತಿ ನಿಲಯದಲ್ಲಿ ವಾಸವಾಗಿದ್ದು, ವಿವಿಧ ಸವಲತ್ತು ಪಡೆಯಬಹುದು. ಬೆಂಗಳೂರಿನಲ್ಲಿ ವಸತಿ ನಿಲಯ ನಿರ್ಮಾಣಕ್ಕಾಗಿ ರಾಯಚೂರು ನಗರದ ಬ್ರಾಹ್ಮಣ ಸಮಾಜದಿಂದಲೂ ಈ ಹಿಂದೆ ದೇಣಿಗೆ ಸಂಗ್ರಹಿಸಿಕೊಡಲಾಗಿತ್ತೆಂದು ತಿಳಿಸಿದ್ದಾರೆ.