ವಿಜ್ಞಾನ ಕಾಲೇಜಿಗೆ ಮಾನ್ಯತೆ

Updated on: 

ಲಿಂಗಸ್ಗೂರು: ಪಟ್ಟಣದ ಶ್ರೀಸಾಯಿ ವಿದ್ಯಾಪೀಠದ ಸರ್. ಎಂ.ವಿಶ್ವೇಶ್ವರಯ್ಯ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಸಂಪೂರ್ಣ ಪರವಾನಗಿ ಪಡೆದಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕ ಪಡಬೇಕಾಗಿಲ್ಲ ಎಂದು ಕಾಲೇಜು ಪ್ರಾಂಶುಪಾಲ ಆರ್.ಸುರೇಶಕುಮಾರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ, ಜಿಲ್ಲೆಯಲ್ಲಿ 2014- 15ನೇ ಸಾಲಿನಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳು ಪದವಿ ಪೂರ್ವ ಕಾಲೇಜುಗಳನ್ನು ಆರಂಭ ಮಾಡಿದ್ದು, ಅನುಮತಿ ಪಡೆಯದೆ ಇರುವ ಕಾಲೇಜುಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯಬಾರದು. ಒಂದು ವೇಳೆ ಪಡೆದರೆ ಮುಂದಾಗುವ ತೊಂದರೆಗೆ ವಿದ್ಯಾರ್ಥಿಗಳು ಮತ್ತು ಪೋಷಕರೇ ಹೊಣೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಇತ್ತೀಚೆಗೆ ತಿಳಿಸಿದ್ದರು. ಇಂತಹ ಪರವಾನಗಿ ಪಡೆಯದ ಕಾಲೇಜುಗಳಲ್ಲಿ ಲಿಂಗಸ್ಗೂರಿನ ಸರ್.ಎಂ. ವಿಶ್ವೇಶ್ವರಯ್ಯ ಸ್ವತಂತ್ರ ಪದವಿ ಪೂರ್ವ ಕಾಲೇಜು ಹೆಸರನ್ನೂ ಪ್ರಸ್ತಾಪಿಸಿದ್ದಾರೆ. ಆದರೆ ಶ್ರೀಸಾಯಿ ವಿದ್ಯಾಪೀಠ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನೂತನವಾಗಿ ಪ್ರಾರಂಭಿಸಿದ ಸರ್.ಎಂ. ವಿಶ್ವೇಶ್ವರಯ್ಯ ಸ್ವತಂತ್ರ ಪಪೂ ವಿಜ್ಞಾನ ಕಾಲೇಜು ಎಲ್ಲ ಸೌಲಭ್ಯ ಹೊಂದಿದ್ದು, ಇಲಾಖೆಯಿಂದ ಪರವಾನಗಿ (ಕಾಲೇಜು ಸಂಕೇತ ಆರ್‌ಆರ್226) ಪಡೆದಿದೆ. ಕಾರಣ ವಿದ್ಯಾರ್ಥಿಗಳು ಹಾಗೂ ಪೋಷಕರು ಯಾವುದೇ ಅನುಮಾನ ಮತ್ತು ಆತಂಕ ಪಡದೇ ಸದರಿ ಕಾಲೇಜಿಗೆ ಬೆಂಬಲ ಹಾಗೂ ಪ್ರೋತ್ಸಾಹ ನೀಡಿ ತಮ್ಮ ಮಕ್ಕಳ ಪ್ರವೇಶ ಪಡೆದು ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
--

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com