ರಾಯಚೂರು: ಮಾನವಿ ಪಟ್ಟಣದ ಸಿಂಗಾಪೂರ ಗ್ರಾಮದ ರಸ್ತೆಯಲ್ಲಿ ಅಕ್ರಮವಾಗಿ ಎರಡು ಲಾರಿಗಳಲ್ಲಿ ಗೋದಾಮಿನಿಂದ ಸಾಗಿಸಲು ಯತ್ನಿಸುತ್ತಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. ಗ್ರಾಮದ ಸಿಂಗಾಪುರ ರಸ್ತೆಯಲ್ಲಿರುವ ಗೋದಾಮಿನಿಂದ ಎರಡು ಲಾರಿಗಳಲ್ಲಿ ಸುಮಾರು 1500 ಚೀಲ ಅಕ್ಕಿಯನ್ನು ಸಾಗಿಸಲು ಯತ್ನಿಸುತ್ತಿದ್ದ ವೇಳೆ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ. ಅನ್ನಭಾಗ್ಯ ಯೋಜನೆಯ ಅಕ್ಕಿ ಇದಾಗಿದೆ ಎಂದು ಹೇಳಲಾಗಿದೆ. ಈ ಕುರಿತು ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ