ಶಿವಮೊಗ್ಗ: ವೈದ್ಯ ಡಾ. ರತ್ನಾಕರ್ ರಚಿಸಿರುವ ದಿನಮಣಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಸಂಜೆ 6 ಗಂಟೆಗೆ ನಡೆಯಲಿದ್ದು, ಸಾಹಿತಿ ವಸುಧೇಂದ್ರ ಬಿಡುಗಡೆ ಮಾಡುವರು. ಈ ಪುಸ್ತಕದ ಮೊದಲ ಮುದ್ರಣದ ಒಂದು ಸಾವಿರ ಪ್ರತಿಗಳನ್ನು ಶ್ರೀ ಶಾರದಾದೇವಿ ಅಂಧರ ವಿಕಾಸ ಕೇಂದ್ರಕ್ಕೆ ದೇಣಿಗೆ ನೀಡಲಾಗಿದೆ.
ನಂತರ ಅವರು ರವಣಿಗೆ ಮತ್ತು ಜೀವನ ಮೌಲ್ಯ ಕುರಿತು ಉಪನ್ಯಾಸ ಮಾಡಲಿದ್ದಾರೆ. ನಂತರ ಉಡುಪಿಯ ಅಂಬಲಪಾಡಿಯ ಶ್ರೀ ಲಕ್ಷ್ಮೀಜನಾರ್ಧನ ಯಕ್ಷಗಾನ ಕಲಾಮಂಡಳಿಯು ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರಸಂಗ ಪ್ರದರ್ಶನವಿರುತ್ತದೆ.