ಶಿವಮೊಗ್ಗ: ಗಾಂಧಿ ನಗರದ ಗುರು ಕಣ್ಣಿನ ಆಸ್ಪತ್ರೆ ಆವರಣದಲ್ಲಿ ಫೆ.9ರಂದು ಬೆಳಿಗ್ಗೆ 8ಗಂಟೆಯಿಂದ ಉಚಿತ ತಲೆನೋವು ತಪಾಸಣೆ ಶಿಬಿರ ಏರ್ಪಡಿಸಿದೆ. ಆರ್ಥಿಕವಾಗಿ ಹಿಂದುಳಿದವರು ಬೆಳಗ್ಗೆ 10ಗಂಟೆಯೊಳಗೆ ಹೆಸರು ನೋಂದಾಯಿಸಿ ಟೋಕನ್ ಪಡೆಯುವಂತೆ ಡಾ. ಎಚ್.ವಿ. ಗಿರಿಸ್ವಾಮಿ ತಿಳಿಸಿದ್ದಾರೆ. ವಿವರಗಳಿಗಾಗಿ- 08182-270647.
ಇಂದು ಬೃಹತ್ ರಾಜ್ಯ ಸಮ್ಮೇಳನ
ಶಿವಮೊಗ್ಗ: ದಲಿತ ವಿಮೋಚನಾ ಸೇನೆ- ಕರ್ನಾಟಕ ರಾಜ್ಯ ಸಮಿತಿ ಫೆ.6ರಂದು ಬೆಳಿಗ್ಗೆ 11.30ಕ್ಕೆ ಅಂಬೇಡ್ಕರ್ ಭವನದಲ್ಲಿ ಜನವರಿ 26 ಸಂವಿಧಾನರ್ಪಣ ದಿನ ಅಂಗವಾಗಿ 11ನೇ ಬೃಹತ್ ರಾಜ್ಯ ಸಮ್ಮೇಳನ ಹಮ್ಮಿಕೊಂಡಿದೆ. ವಿವಿಧ ಜಿಲ್ಲೆಯಿಂದ ಸಾವಿರ ಸಂಖ್ಯೆಯಲ್ಲಿ ಕಾರ್ಯಕರ್ತರು, ಆಗಮಿಸಲಿದ್ದಾರೆ.
ಡಾ. ಮಹಾಂತ ಸ್ವಾಮಿ ನಿಧನಕ್ಕೆ ಸಂತಾಪ
ಶಿವಮೊಗ್ಗ: ಹರಿಹರದ ಪಂಚಮಸಾಲಿ ಪೀಠದ ಡಾ. ಮಹಾಂತ ಸ್ವಾಮಿಗಳು ಸ್ವರ್ಗಸ್ಥರಾಗಿದ್ದು, ಅವರಿಗೆ ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ. ಸಂಸದ ಬಿ.ವೈ. ರಾಘವೇಂದ್ರ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಸಂತಾಪ ಸೂಚಿಸಿದ್ದಾರೆ. ವೀರಶೈವ ಲಿಂಗಾಯಿತ ಪಂಚಮಸಾಲಿ ನಗರ ಮತ್ತು ತಾಲೂಕು ಸಮಿತಿ ಸಂತಾಪ ಸೂಚಿಸಿದೆ ಎಂದು ಅಧ್ಯಕ್ಷ ಎಚ್.ವಿ. ಮಹೇಶ್ವರಪ್ಪ ತಿಳಿಸಿದ್ದಾರೆ.