ಭದ್ರಾವತಿ: ಪಟ್ಟಣದಲ್ಲಿ ಇಂದಿನಿಂದ (ಫೆ.9) ಎರಡು ದಿನಗಳ ತಾಲೂಕು ಬ್ರಾಹ್ಮಣರ ಸಮಾವೇಶ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಈ ಪ್ರಯುಕ್ತ ಶನಿವಾರ ಮಧ್ಯಾಹ್ನ 3.30ಕ್ಕೆ ಹಾಲಪ್ಪ ವೃತ್ತದ ಗಣಪತಿ ದೇವಸ್ಥಾನದಿಂದ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದವರೆಗೆ ಶೋಭಾಯಾತ್ರೆ ಏರ್ಪಡಿಸಲಾಗಿದೆ. ನಂತರ 5 ಗಂಟೆಗೆ ಕಲ್ಯಾಣ ಮಂಟಪದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ತೀರ್ಥಹಳ್ಳಿಯ ದೂರ್ವಾಸಪುರಂನ ಮುಳಬಾಗಿಲು ಕೃಷ್ಣಾನಂದಮಠದ ದ್ವಾರಕಾ ಜಗದ್ಗುರು ಸಂಸ್ಥಾನಂ ಶ್ರೀಗಳಾದ ಕೃಷ್ಣಾನಂದ ತೀರ್ಥ ಸ್ವಾಮಿಗಳು, ತಮಿಳುನಾಡಿನ ವಿಲ್ಲಿಪುತ್ತೂರಿನ ಮಣವಾಳ ಮಾಮುನಿ ಮಠದ ಆಂಡಾಳ್ ಸನ್ನಿಧಿಯ ಶಠಗೋಪರಾಮಾನುಜ ಜೀಯರ್ ಹಾಗೂ ಉಡುಪಿಯ ಪೇಜಾವರ ಅಧೋಕ್ಷಜ (ಕಿರಿಯ ಪಟ್ಟ) ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಉಪಸ್ಥಿತರಿದ್ದು ಆಶೀರ್ವಚ ನೀಡುವರು.
ಶೋಭಾಯಾತ್ರೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಪಟ್ಟಣದ ಸಮಸ್ತ ವಿಪ್ರರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಾಲೂಕು ಬ್ರಾಹ್ಮಣಸಭಾ ಅಧ್ಯಕ್ಷರು ಮತ್ತು ಸಮಾವೇಶದ ಆಯೋಜಕರು ಕೋರಿದ್ದಾರೆ.