ಸೊರಬ ರಸ್ತೆ ವಿಸ್ತರಣೆಗೆ ಆಗ್ರಹ

Updated on: 

ಸಾಗರ: ಪಟ್ಟಣದ ಸೊರಬ ರಸ್ತೆ ವಿಸ್ತರಣೆಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ಕಾರು ಚಾಲಕರು ಹಾಗೂ ಮಾಲೀಕರು ಸಂಘದ ವತಿಯಿಂದ ಶುಕ್ರವಾರ  ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
 ಕಿರಿದಾಗಿರುವ ಸೊರಬ ರಸ್ತೆಯಲ್ಲಿ ಮಿತಿಮೀರಿದ ವಾಹನ ದಟ್ಟಣೆ, ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಸಂಚಾರಕ್ಕೆ ತೀವ್ರ ಅಡ್‌ಡಿ ಉಂಟಾಗುತ್ತಿದ್ದು ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ವ್ಯಾಪಾರಸ್ಥರು ವ್ಯವಹಾರದ ಲಾಭ ಪಡೆಯಲು ತಮ್ಮ ಅಂಗಡಿಯ ಮುಂಭಾಗವನ್ನು ರಸ್ತೆಯವರೆಗೂ ಬಳಸಿಕೊಳ್ಳುತ್ತಿರುವುದರಿಂದ  ಸುಗಮ ಸಂಚಾರ ಸಾಧ್ಯವಾಗುತ್ತಿಲ್ಲ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ತಕ್ಷಣ ಈ ರಸ್ತೆಯನ್ನು ಅಗಲೀಕರಣ ಮಾಡದಿದ್ದರೆ ರಸ್ತೆಯನ್ನು ಬಂದ್ ಮಾಡಿ ಉಗ್ರವಾಗಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಇದೇ ಸಂದರ್ಭದಲ್ಲಿ ಇಲ್ಲಿನ ತಹಶೀಲ್ದಾರರನ್ನು ಪದೇ ಪದೇ ವರ್ಗಾವಣೆ ಮಾಡುತ್ತಿರುವುದನ್ನು ಖಂಡಿಸಿ ಸಂಘಟನೆಗಳು ಮನವಿ ಸಲ್ಲಿಸಿದವು.
ಎರಡೂ ಸಂಘಟನೆಗಳ ಪದಾಧಿಕಾರಿಗಳು, ಪ್ರಮುಖರು ಹಾಜರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com