ಶಿವಮೊಗ್ಗ: ಸಮನ್ವಿತ ಸ್ಟಡಿ ಸರ್ಕಲ್ ಫೆ.10 ರಂದು ಬೆಳಿಗ್ಗೆ 10 ಗಂಟೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಹಾಗೂ ಕೆಎಎಸ್, ಪಿಎಸ್ಐ, ಇಎಸ್ಐ ಮತ್ತು ಕೆಪಿಎಸ್ಸಿ ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ಒಂದು ದಿನದ ಉಚಿತ ಕಾರ್ಯಾಗಾರ ಏರ್ಪಡಿಸಿದೆ. ಹೆಚ್ಚಿನ ವಿವರಗಳಿಗಾಗಿ- 9482918484.
ಇಂದು ಗೋಷ್ಠಿ
ಶಿವಮೊಗ್ಗ: ವಡ್ಡಿನಕೊಪ್ಪದ ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಫೆ.10ರಂದು ಮಧ್ಯಾಹ್ನ 3.30ರಿಂದ ಸಂಜೆ 6ಗಂಟೆವರೆಗೆ ಪೋಷಕರಿಗಾಗಿ ಮಕ್ಕಳ ಯಶಸ್ವಿ ಪಾಲನೆ ಬಗ್ಗೆ ವಿಚಾರ ಗೋಷ್ಠಿ ಏರ್ಪಡಿಸಲಾಗಿದೆ. ಹಿರಿಯ ಪತ್ರಕರ್ತ ರಾಮಚಂದ್ರ ಗುಣಾರಿ ಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದು, ಪ್ರಸ್ತುತ ಪೋಷಕರು ಎದುರಿಸುತ್ತಿರುವ ಹಲವಾರು ಸವಾಲುಗಳ ಬಗ್ಗೆ ಮಾಹಿತಿ ನೀಡುವರು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ವಿವರಗಳಿಗಾಗಿ-8884410777.
ಪ್ರತಿಭಾ ಪುರಸ್ಕಾರ
ಶಿವಮೊಗ್ಗ: ಶಿವಮೊಗ್ಗ ಸಿಎ ಸ್ಟುಡೆಂಡ್ ಅಸೋಸಿಯೇಷನ್ ಫೆ.10 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಛೇಂಬರ್ ಆಫ್ ಕಾಮರ್ಸ್ ಹಾಲ್ನಲ್ಲಿ ಸಿಎನಲ್ಲಿ ಹೆಚ್ಚು ಅಂಕ ಪಡೆದ 7 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಏರ್ಪಡಿಸಿದೆ. ಕಾರ್ಯಕ್ರಮದ ಅಸೋಸಿಯೇಷನ್ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸುವರು. ಕಾರ್ಯದರ್ಶಿ ರಘುರಾಮ್ ಭಟ್ ಮತ್ತು ವಿದ್ಯಾರ್ಥಿಗಳ ಸಂಘದ ಕೋ ಆರ್ಡಿನೇಟರ್ ಕೆ.ವಿ. ನರೇಂದ್ರ ಉಪಸ್ಥಿತರಿರುವರು.