ಶಿವಮೊಗ್ಗ: ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಫೆಬ್ರವರಿ 16ರಂದು ಬೆಳಿಗ್ಗೆ 5.30ಕ್ಕೆ ಶಿವಮೊಗ್ಗಕ್ಕೆ ಆಗಮಿಸುವರು. ಅಂದು ಬೆಳಿಗ್ಗೆ 9ಕ್ಕೆ ಮಲ್ಲಿಗೇನಹಳ್ಳಿ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವರು. ಬೆಳಿಗ್ಗೆ 9.30ಕ್ಕೆ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರವು ವಿನೋಬನಗರದಲ್ಲಿ ಏರ್ಪಡಿಸಿರುವ ವಿವಿಧ ಸಂಸ್ಥೆಗಳಿಗೆ ಕಾಯ್ದಿರಿಸಿದ ನಿವೇಶನಗಳ ವಿತರಣಾ ಸಮಾರಂಭ ಹಾಗೂ 2ನೇ ಮಹಡಿ ಶಂಕುಸ್ಥಾಪನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಬೆಳಿಗ್ಗೆ 11.30ಕ್ಕೆ ಜಿಲ್ಲಾ ಕೈಗಾರಿಕಾ ಉತ್ಪನ್ನಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಅವರು ಶಿವಮೊಗ್ಗದಿಂದ ಮಂಗಳೂರಿಗೆ ತೆರಳುವರು.
18ಕ್ಕೆ ಕಾರ್ಯಕ್ರಮ
ಶಿವಮೊಗ್ಗ: ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮಂತ್ರಾಲಯವು ಜಿಲ್ಲಾ ಕೈಗಾರಿಕಾ ಕೇಂದ್ರ, ಮತ್ತು ಸಾಗರದ ಮಲೆನಾಡು ಸಣ್ಣ ಕೈಗಾರಿಕೆಗಳ ಮಾಲೀಕರು ಮತ್ತು ನೌಕರರ ಸಂಘದ ಸಹಯೋಗದೊಂದಿಗೆ ಫೆಬ್ರವರಿ 18ರಂದು ಹೋಟೆಲ್ ವರದಶ್ರೀ ಸಭಾಂಗಣದಲ್ಲಿ ರಾಜ್ಯ ಮಟ್ಟದ ಮಾರಾಟಗಾರರ ಅಭಿವೃದ್ಧಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವಸ್ತು ಮತ್ತು ಸೇವೆಗಳು ಹಾಗೂ ಸಲಹೆಗಳು, ಮಾರುಕಟ್ಟೆ ಸೌಲಭ್ಯಗಳ ಕುರಿತು ಮಾಹಿತಿ ದೊರೆಯಲಿದ್ದು, ಮಾರಾಟಗಾರರು ಮತ್ತು ಕೈಗಾರಿಕೋದ್ಯಮಿಗಳು ಭಾಗವಹಿಸುವಂತೆ ಎಂ.ಎಸ್.ಎಂ.ಇ.ಯ ಸಹಾಯಕ ನಿರ್ದೇಶಕ ಕೆ. ಶಿವಪ್ಪ ತಿಳಿಸಿದ್ದಾರೆ.