ಶಿವಮೊಗ್ಗ: ರಾಮಣ್ಣ ಶ್ರೇಷ್ಠಿ ಪಾರ್ಕ್ನ ಶ್ರೀ ಸರ್ವ ಸಿದ್ದಿವಿನಾಯಕ ಸ್ವಾಮಿ ದೇವಾಲಯದಲ್ಲಿ ಫೆ.23ರಂದು ವಿನಾಯಕ ಸ್ವಾಮಿಯ ಸ್ಥಿರಮೂರ್ತಿ ಪ್ರತಿಷ್ಠಾಪನೆಯ 40ನೇ ವಾರ್ಷಿಕ ಜಯಂತ್ಯುತ್ಸವದ ಅಂಗವಾಗಿ 108 ಕುಂಭಾಭಿಷೇಕ ಏರ್ಪಡಿಸಲಾಗಿದೆ. ಅಂದು ವಿನಾಯಕ ಸ್ವಾಮಿಗೆ ವಿವಿಧ ಅಲಂಕಾರ ಹಾಗೂ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸರ್ವಸಿದ್ಧಿ ವಿನಾಯಕ ಸ್ವಾಮಿ ಸೇವಾ ಸಮಿತಿ ತಿಳಿಸಿದೆ.
ಫನ್ ಫೆಸ್ಟ್ ಮೇಳ
ಶಿವಮೊಗ್ಗ: ಐಕ್ಯ ಗ್ರೂಪ್ ಫೆ.24ರಂದು ಬೆಳಿಗ್ಗೆ 10ರಿಂದ ರಾತ್ರಿ 10ರವರೆಗೆ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಒಕ್ಕಲಿಗರ ಸಂಘದಲ್ಲಿ ಸಂಡೇ ಫನ್ ಫೆಸ್ಟ್ ಮೇಳ ಏರ್ಪಡಿಸಿದೆ. ಮೇಳದಲ್ಲಿ ಸುಮಾರು 50 ಸ್ಟಾಲ್ಗಳಿದ್ದು, ಗೃಹಿಣಿ, ವಿದ್ಯಾರ್ಥಿಗಳು ಕರಕುಶಲಕರ್ಮಿಗಳು ತಯಾರಿಸಿದ ಅಡುಗೆ ಮತ್ತು ವಸ್ತುಗಳನ್ನು ನೇರವಾಗಿ ಮಾರಾಟ ಮಾಡಲಾಗುತ್ತದೆ. ಇದೇ ವೇಳೆ ಪ್ಯಾಶನ್ ಶೋ ಸಹ ಏರ್ಪಡಿಸಲಾಗಿದೆ ಎಂದು ಐಕ್ಯಗ್ರೂಪ್ ತಿಳಿಸಿದೆ.