ಶಿವಮೊಗ್ಗ: ವಿಧಾನ ಪರಿಷತ್ತಿನ ಸಭಾಧ್ಯಕ್ಷ ಡಿ.ಎಚ್. ಶಂಕರಮೂರ್ತಿಯವರು 20ರಂದು ಬೆಳಿಗ್ಗೆ 11ಗಂಟೆಗೆ ತಾಲೂಕಿನ ಲಕ್ಕಿನಕೊಪ್ಪ ಸರ್ಕಲ್ನಲ್ಲಿರುವ ಅಮೂಲ್ಯ ಶೋಧಕ್ಕೆ ಭೇಟಿ ನೀಡುವರು. ಮಧ್ಯಾಹ್ನ 12ಗಂಟೆಗೆ ಶಿವಮೊಗ್ಗದಿಂದ ದಾವಣಗೆರೆ ಜಿಲ್ಲೆಗೆ ಪ್ರಯಾಣ ಬೆಳೆಸುವರು.
ಚುನಾವಣಾಧಿಕಾರಿ ಕಾರ್ಯಾಲಯ ಕಾರ್ಯಾರಂಭ
ಶಿವಮೊಗ್ಗ: ಚುನಾವಣಾ ಆಯೋಗ ಭದ್ರಾವತಿ ನಗರಸಭೆ ಚುನಾವಣೆಗೆ ಸಂಬಂಧಿಸಿ ತನ್ನ ಕಾರ್ಯಾಲಯ ಆರಂಭಿಸಿದ್ದು, ಚಟುವಟಿಕೆಗೆ ಚಾಲನೆ ನೀಡಿದೆ. ನಗರಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 18ರಿಂದ 24ರವರೆಗಿನ ಎಂ.ಎಂ. ಕಾಂಪೌಂಡ್, ಎಂಪಿಎಂ ಆಸ್ಪತ್ರೆ, ಸುರುಗಿತೋಪು, ಎಂಪಿಎಂ 6 ಮತ್ತು 8ನೇ ವಾರ್ಡ್, ಉಜ್ಜಿನೀಪುರ, ತಿಮ್ಲಾಪುರ ಡಿಜಿಹಳ್ಳಿ ಬೊಮ್ಮನಕಟ್ಟೆ-ಮೂಲೆಕಟ್ಟೆ ಪ್ರದೇಶದವರೆಗಿನ ಚುನಾವಣಾಧಿಕಾರಿ ಕಾರ್ಯಾಲಯವನ್ನು ಭದ್ರಾವತಿಯ ಎನ್.ಎಂ.ಸಿ. ಮುಖ್ಯರಸ್ತೆಯಲ್ಲಿರುವ ರೇಷ್ಮೆ ವಿಸ್ತರಣಾಧಿಕಾರಿ ಕಚೇರಿಯಲ್ಲಿ ತೆರೆಯಲಾಗಿದೆ. ವಾರ್ಡ್ ಸಂಖ್ಯೆ 25ರಿಂದ 31ರವರೆಗಿನ ಹುಡ್ಕೋ-ಬುಳ್ಳಾಪುರ, ಬಾಲಭಾರತಿ ಬೆಣ್ಣೆಕೃಷ್ಣ ಸರ್ಕಲ್, ಆಂಜನೇಯ ಅಗ್ರಹಾರ ಕೂಲಿಬ್ಲಾಕ್, ಗಣೇಶ ಕಾಲೋನಿ, ಕಿತ್ತೂರು ರಾಣಿ ಚೆನ್ನಮ್ಮ ಲೇಔಟ್, ಸಿದ್ಧಾಪುರ ಹಾಗೂ ಜಿಂಕ್ಲೈನ್ ಪ್ರದೇಶದವರೆಗಿನ ಚುನಾವಣಾಧಿಕಾರಿ ಕಚೇರಿಯನ್ನು ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ ಪಂಚಾಯತ್ರಾಜ್ ಎಂಜಿನಿಯರಿಂಗ್ ಉಪವಿಭಾಗದಲ್ಲಿ ಪ್ರಾರಂಭಿಸಲಾಗಿದೆ. ಸಾರ್ವಜನಿಕರು ಚುನಾವಣಾ ಮಾಹಿತಿಗಳಿಗಾಗಿ ಸಂಬಂಧಪಟ್ಟ ಚುನಾವಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ.
ಮತಗಟ್ಟೆ ಸಾಮಗ್ರಿಗಳ ಸರಬರಾಜಿಗೆ ಟೆಂಡರ್ ಆಹ್ವಾನ
ಶಿವಮೊಗ್ಗ: ಜಿಲ್ಲಾ ಚುನಾವಣಾ ಶಾಖೆಯು ಮಾರ್ಚ್ ಮಾಹೆಯಲ್ಲಿ ನಡೆಸಲು ಉದ್ದೇಶಿಸಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿ ಮತಗಟ್ಟೆಗಳಿಗೆ ಸಾಮಗ್ರಿಗಳನ್ನು ಸರಬರಾಜು ಮಾಡಲು ಅರ್ಹ ಸರಬರಾಜುದಾರರಿಂದ ದರಪಟ್ಟಿಗಳನ್ನು ಆಹ್ವಾನಿಸಿದೆ.
ಪೂರೈಸುವ ಲೇಖನ ಸಾಮಗ್ರಿ, ಪ್ರಮಾಣ ಮತ್ತು ದರಕ್ಕೆ ಸಂಬಂಧಿಸಿದ ವಿವರಗಳನ್ನು ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಾಖೆಯಲ್ಲಿ ವೀಕ್ಷಿಸಬಹುದಾಗಿದೆ. ವಿವರಗಳಿಗಾಗಿ ಜಿಲ್ಲಾಧಿಕಾರಿಗಳ ಕಚೇರಿ ದೂ-08182 271101ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.