ಶಿವಮೊಗ್ಗ: ಶ್ರೀ ಪುರಂದರ ದಾಸರ ಆರಾಧನೋತ್ಸವ ಅಂಗವಾಗಿ ಪ್ರತಿವರ್ಷ ದೇವರನಾಮ ಉಚಿತ ಶಿಬಿರ ನಡೆಸಿಕೊಂಡು ಬರುತ್ತಿರುವ ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯವು ಈ ಬಾರಿ ವಿಶೇಷವಾಗಿ ಪುರುಷರಿಗೆ ಶಿಬಿರ ಆಯೋಜಿಸಿದೆ. ಯಾವುದೇ ಸಂಗೀತ ಶಿಕ್ಷಣ ತರಬೇತಿ ಇಲ್ಲದವರು ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಜ.23ರಿಂದ ತರಗತಿ ಬಸವನಗುಡಿಯಲ್ಲಿರುವ ವಿದ್ಯಾಲಯದಲ್ಲಿ ಆರಂಭವಾಗಲಿದೆ. ಒಂದು ತಿಂಗಳು ನಿರಂತರವಾಗಿ ಶಿಬಿರ ನಡೆಯಲಿದ್ದು, ಮಾಹಿತಿಗೆ ಮೊ- 9448241149, 9035092500ಗೆ ಸಂಪರ್ಕಿಸಿ.
ತರಬೇತಿ ಶಿಬಿರ
ಶಿವಮೊಗ್ಗ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮಂತ್ರಾಲಯವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮಹಿಳೆಯರಿಗೆ 6 ವಾರಗಳ ಆಹಾರ ಉದ್ಯಮಶೀಲತಾ ತರಬೇತಿ ಶಿಬಿರವನ್ನು ಆಯೋಜಿಸಿದೆ. ಎಸ್ಎಸ್ಎಲ್ಸಿ ಪಾಸಾದ ಅಥವಾ ನಪಾಸಾದ ಮಹಿಳೆಯರು ಈ ತರಬೇತಿಯಲ್ಲಿ ಭಾಗವಹಿಸಬಹುದು. ಮಾಹಿತಿಗೆ97407 60061ಗೆ ಸಂಪರ್ಕಿಸಿ.