ಶಿವಮೊಗ್ಗ: ಸಮನ್ವಯ ಫೌಂಡೆಶನ್ ಹಾಗೂ ಶ್ರೀ ಕೃಷ್ಣ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಚೇಂಜಸ್ ಸಂಸ್ಥೆ ಜ.28ರಂದು ಬೆಳಿಗ್ಗೆ 6.45ರಿಂದ 8.45ವರೆಗೆ ಕುವೆಂಪು ರಂಗಮಂದಿರದಲ್ಲಿ ಯುವ ಸಮೂಹದ ಮೂಲಕ ರಾಷ್ಟ್ರಭಕ್ತಿ ಗೀತೆಗಳ ಅರ್ಪಣೆ ಕಾರ್ಯಕ್ರಮ ಏರ್ಪಡಿಸಿದೆ.
ವಿಶ್ರಾಂತ ಉಪ ಕುಲಪತಿ ಡಾ. ಚಿದಾನಂದಗೌಡ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಕುವೆಂಪು ಮಗಳು, ಲೇಖಕಿ ತಾರಣಿ, ತುಮಕೂರು ವಿಶ್ವವಿದ್ಯಾಲಯದ ಸಹ ಪ್ರಧ್ಯಾಪಕ ಡಾ.ಬಿ. ರಮೇಶ್ ಉಪಸ್ಥಿತರಿರುವರು. ನಗರದ ಎಟಿಎನ್ಸಿಸಿ ಎಜುರೈಟ್ ಕಾಲೇಜು, ಡಾ.ಬಿ.ಆರ್. ಅಂಬೇಡ್ಕರ್ ಕಾಲೇಜು, ಹೊಯ್ಸಳ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಜ್ಞಾನಸಾಗರ ಸೇರಿದಂತೆ ವಿವಿಧ ಕಾಲೇಜಿನ ಆಯ್ದ 15 ವಿದ್ಯಾರ್ಥಿಗಳು ದೇಶ ಭಕ್ತಿಗೀತೆಗಳನ್ನು ಒಟ್ಟಾಗಿ ಹಾಡಲಿದ್ದಾರೆ.
ಅಲ್ಲದೆ ಗೀತೆಗಳೊಂದಿಗೆ ಸ್ಟೆಪ್ ಹೋಲ್ಡರ್ಸ್ ಡ್ಯಾನ್ಸ್ ಗ್ರೂಪ್ ಮತ್ತು ಸ್ಟೈಲ್ ಡ್ಯಾನ್ ಗ್ರೂಪ್ ಅವರಿಂದ ನೃತ್ಯ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರತಿಯೊಬ್ಬರು ಪಾಸ್ ಪಡೆದುಕೊಳ್ಳಬೇಕು ಎಂದು ಫೌಂಡೇಶನ್ನ ಸಂಯೋಜಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9945387650 ಸಂಖ್ಯೆಗೆ ಕರೆ ಮಾಡಲು ಮನವಿ ಮಾಡಲಾಗಿದೆ.