ಇತಿಹಾಸದ ಮಹತ್ವ ತಿಳಿಯಿರಿ

Updated on: 

ಸಾಗರ: ಮುಂದಿನ ಪೀಳಿಗೆಗೆ ಬದುಕಿಗೆ ದಿಕ್ಸೂಚಿಯಾಗಿರುವ ಇತಿಹಾಸದ ಮಹತ್ವ ತಿಳಿಸಿಕೊಡಬೇಕು ಎಂದು ಲೇಖಕ ವಿಲಿಯಂ ಹೇಳಿದರು.
 ಇಂದಿರಾಗಾಂಧಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಇತಿಹಾಸ ವಿಭಾಗ ಶನಿವಾರ ಏರ್ಪಡಿಸಿದ್ದ ಇತಿಹಾಸ ಉಳಿಸಿ ಪರಂಪರೆ ಜಾಥಾ ಉದ್ಘಾಟಿಸಿ, ನಮ್ಮ ಇತಿಹಾಸದ ಅರಿವು ನಮಗೇ ಇಲ್ಲದಿರುವುದು ವಿಷಾದದ ಸಂಗತಿ ಎಂದರು.
ಸಾಗರ ತಾಲೂಕಿನಲ್ಲಿ ಅನೇಕ ಐತಿಹಾಸಿಕ ಸ್ಥಳಗಳಿವೆ. ಅವುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಪೂರ್ಣ ಮಾಹಿತಿ ನೀಡಬೇಕಾದದ್ದು ಶಿಕ್ಷಣ ಸಂಸ್ಥೆಗಳ ಪ್ರಮುಖ ಕರ್ತವ್ಯವಾಗಿದೆ. ಇಕ್ಕೇರಿ, ಕೆಳದಿಯಂತಹ ಐತಿಹಾಸಿಕ ಸ್ಥಳಗಳು ನಮ್ಮೂರ ಶ್ರೀಮಂತಿಕೆ ಹೆಚ್ಚಿಸಿವೆ. ಹಿಂದಿನ ಅರಸರು ತಮ್ಮ ಪೂರ್ವಿಕರ ನೆನಪಿನಲ್ಲಿ ಊರು, ಕೆರೆ, ದೇವಾಲಯಗಳನ್ನು ಕಟ್ಟುತ್ತಿದ್ದರು. ಅದನ್ನು ಉಳಿಸಿಕೊಳ್ಳುವ ಕೆಲಸವಾದರೂ ನಮ್ಮಿಂದ ನಡೆಯಬೇಕು. ಸಾಗರ ಸುತ್ತಮುತ್ತ ಒಂದು ಕಾಲದಲ್ಲಿ 640 ಕೆರೆಗಳು ಇದ್ದವು ಎಂದು ಇತಿಹಾಸ ಹೇಳಿದರೆ, ಈಗ ಕೇವಲ 40 ಕೆರೆಗಳು ಮಾತ್ರ ಉಳಿದಿದೆ ಎಂದು ವಿವರಿಸಿದರು.
 ಕಾಲೇಜು ಅಭಿವೃದ್ಧಿಸಮಿತಿ ಕಾರ್ಯಾಧ್ಯಕ್ಷ ಬಿ.ಎಚ್. ರಾಘವೇಂದ್ರ, ನಮ್ಮ ಐತಿಹಾಸಿಕ ಸ್ಥಳಗಳ ಅಭಿವೃದ್ಧಿಗೆ ಸರ್ಕಾರಗಳು ಹೆಚ್ಚಿನ ಗಮನ ಹರಿಸುತ್ತಿಲ್ಲ ಎಂದು ಹೇಳಿದರು. ಪ್ರಾಚಾರ್ಯ ಡಾ. ಅಶೋಕ ಡಿ. ರೇವಣಕರ್, ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಕೆ.ಪ್ರಭಾಕರ ರಾವ್, ಪ್ರೊ. ರಾಮಕೃಷ್ಣಯ್ಯ ಇದ್ದರು. ನಂತರ ವಿದ್ಯಾರ್ಥಿನಿಯರನ್ನು ಒಳಗೊಂಡ ಪರಂಪರೆ ಉಳಿಸಿ ಜಾಥಾ ಇಕ್ಕೇರಿಗೆ ಭೇಟಿ ಮಾಡಿ, ಅಲ್ಲಿನ ಇತಿಹಾಸದ ಬಗ್ಗೆ ಮಾಹಿತಿ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com