ಶಿವಮೊಗ್ಗ: ಸಂಸ್ಕಾರ ಭಾರತಿ ಮೂರು ದಿನಗಳಿಂದ ರವೀಂದ್ರ ನಗರದಲ್ಲಿ ಆಯೋಜಿಸಿದ್ದ ಭಾರತ ಮಾತಾ ಪೂಜನ್, ಭೂ ಅಲಂಕರಣ ಶಿಬಿರ ಯಶಸ್ವಿಯಾಗಿ ಸಂಪನ್ನಗೊಂಡಿತು.
ಮೈಸೂರಿನ ನೃತ್ಯಗಾರ್ತಿ ಕೃಪಾ ಫಡ್ಕೆ ಮತ್ತು ತಂಡದಿಂದ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ವಂದೇ ಮಾತರಂ ಗೀತೆಯ ಪಾತ್ರ ಬಗ್ಗೆ ನೃತ್ಯ ರೂಪಕ ಪ್ರಸ್ತುತ ಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕಳೆದ 2 ದಿನಗಳಿಂದ ರಂಗೋಲಿ ಆಯೋಜನೆಗೊಂಡು, ಶಿಬಿರದಲ್ಲಿ ಪಾಲ್ಗೊಂಡಿದ್ದ ಶಿಬಿರಾರ್ಥಿಗಳು ಭಾನುವಾರ ಬೃಹದಾಕಾರದ ರಂಗೋಲಿಯ ಚಿತ್ತಾರ ಮೂಡಿಸಿದರು.
ಜಿಲ್ಲೆಯ ಮಟ್ಟಿಗೆ ದಾಖಲೆಯಾಗಿರುವ ಈ ರಂಗೋಲಿಯನ್ನು ಬೆಳಿಗ್ಗೆ 5ಕ್ಕೆ ಆರಂಭಿಸಿದ್ದು, ಮಧ್ಯಾಹ್ನ 12ರವರೆಗೂ ಚಿತ್ರಿಸುವ ಕಾರ್ಯ ನಡೆದಿತ್ತು. ಕೊನೆಗೆ ಸುಮಾರು 70ಅಡಿ ಸುತ್ತಳತೆಯ ರಂಗೋಲಿ ಚಿತ್ರಿಸಿದರು.