ಶಿವಮೊಗ್ಗ: ಆರ್ಟ್ ಆಫ್ ಲಿವಿಂಗ್ನ ಶ್ರೀ ರವಿಶಂಕರ ಗುರೂಜಿ ಆಯುರ್ವೇದ ಟ್ರಸ್ಟ್ ಫೆ.3ರಂದು ಬೆಳಗ್ಗೆ 9 ಗಂಟೆಯಿಂದ 5ರ ವರೆಗೆ ದುರ್ಗಿಗುಡಿಯ ಆಯುಷ್ ಭಂಡಾರದಲ್ಲಿ ನಾಡಿ ಪರೀಕ್ಷಾ ಶಿಬಿರ ಏರ್ಪಡಿಸಿದೆ. ಬೆಂಗಳೂರಿನ ಆಶ್ರಮದ ವೈದ್ಯರು ಕೇವಲ 10 ನಿವಿಷಗಳಲ್ಲಿ ನಿಮ್ಮ ದೇಹದ ಸಮಸ್ಯೆಯನ್ನು ನಾಡಿ ಪರೀಕ್ಷೆ ಮುಖಾಂತರ ತಿಳಿಸಲಿದ್ದಾರೆ. ಡಯಾಬಿಟಿಸ್, ಹೃದಯ ಸಂಬಂಧಿ ತೊಂದರೆಗಳು, ಜೀರ್ಣಕ್ರಿಯೆ ತೊಂದರೆಗಳು, ಚರ್ಮ, ಸಂಧಿ, ನೋವು, ಅಸ್ತಮಾಗಳಿಗೆ ಪರಿಹಾರ ಸೂಚಿಸಲಿದ್ದಾರೆ ಎಂದು ಟ್ರಸ್ಟ್ ತಿಳಿಸಿದೆ. ವಿವರಗಳಿಗಾಗಿ- 9902049840.
3ಕ್ಕೆ ಲಸಿಕಾ ಶಿಬಿರ
ಶಿವಮೊಗ್ಗ: ಕರ್ನಾಟಕ ಪಶುವೈದ್ಯಕೀಯ ಸಂಘ ಫೆ.3ರಂದು ಬೆಳಿಗ್ಗೆ 10ಗಂಟೆಗೆ ಪಶು ಆಸ್ಪತ್ರೆಯಲ್ಲಿ ಸಾಮೂಹಿಕ ಉಚಿತ ರೇಬಿಸ್ ಲಸಿಕಾ ಶಿಬಿರ ಹಮ್ಮಿಕೊಂಡಿದೆ. ನಗರಸಭಾ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ ಶಿಬಿರ ಉದ್ಘಾಟಿಸುವರು. ಈ ಲಸಿಕೆ ಸರ್ಕಾರದಿಂದ ಉಚಿತವಾಗಿ ಲಭ್ಯವಿಲ್ಲದೇ ಇರುವುದರಿಂದ ಜನಸಾಮಾನ್ಯರು ತಮ್ಮ ಸಾಕು ನಾಯಿಗಳಿಗೆ, ಬೀದಿನಾಯಿಗಳಿಗೆ ಲಸಿಕೆಯಯನ್ನು ಹಾಕಿಸಲು ನಿರ್ಲಕ್ಷ್ಯ ತೋರುತ್ತಾರೆ. ಆದ್ದರಿಂದ ಈ ರೋಗವನ್ನು ನಿರ್ಮೂಲನೆ ಮಾಡಲು ಸಾಮೂಹಿಕ ಉಚಿತ ಲಸಿಕಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಕಾರ್ಯದರ್ಶಿ ಡಾ. ಕೆ. ಅರವಿಂದ್ ತಿಳಿಸಿದ್ದಾರೆ. ವಿವರಗಳಿಗಾಗಿ- 9902185837.
3ಕ್ಕೆ ಯೋಗ ಶಿಬಿರ
ಶಿವಮೊಗ್ಗ: ಯೋಗಾಂಜಲಿ ಡಿವೈನ್ ಹೀಲಿಂಗ್ ಸಂಸ್ಥೆ ಮತ್ತು ಕರ್ನಾಟಕ ಬ್ಯಾಟರೀಸ್ ಆಶ್ರಯದಲ್ಲಿ ಫೆ.3ರಂದು ವಿನೋಬನಗರದ ಸಂಜೀವಿನಿ ಹಾಲ್ನಲ್ಲಿ ಉಚಿತ ಯೋಗನಿದ್ರಾ ಶಿಬಿರ ಏರ್ಪಡಿಸಿದೆ. ಮಾನಸಿಕ ಒತ್ತಡ, ಖಿನ್ನತೆ, ದುಗುಡ, ಭಯ, ಏಕಾಗ್ರತೆ ಸಮಸ್ಯೆಗಳ ಬಗ್ಗೆ ಚಿಕಿತ್ಸೆ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ. ವಿವರಗಳಿಗಾಗಿ- 8884251298.
ನಾಳೆ ಸಭೆ
ಶಿವಮೊಗ್ಗ: ಜಿಲ್ಲಾ ನಾಗರಿಕ ಹಿತರಕ್ಷಣಾ ವೇದಿಕೆ ಫೆ.2ರಂದು ಸಂಜೆ 6ಗಂಟೆಗೆ ವೇದಿಕೆಯ ಮತ್ತೊಂದು ಶಾಖೆ ಆರಂಭಿಸುವ ಉದ್ದೇಶದಿಂದ ಗೋಪಾಳದ ಶ್ರೀ ಶಕ್ತಿ ಗಣಪತಿ ದೇವಸ್ಥಾನದ ಆವರಣದಲ್ಲಿ ಪೂರ್ವಭಾವಿ ಸಭೆ ಕರೆದಿದೆ. ಸಭೆಯಲ್ಲಿ ಗೋಪಾಳದ ಸುತ್ತಮುತ್ತಲಿನ ಪ್ರದೇಶದ ಸಾರ್ವಜನಿಕರ ಬೇಡಿಕೆ, ನ್ಯೂನತೆ, ಕಳಪೆ ಕಾಮಗಾರಿ ಹಾಗೂ ಸಾರ್ವಜನಿಕ ಹಣದ ದುರುಪಯೋಗ ಸೇರಿದಂತೆ ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗುವುದು. ಆಸಕ್ತ ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಳ್ಳುವಂತೆ ಸಹನಾ ಜೆ. ರಾವ್ ತಿಳಿಸಿದ್ದಾರೆ. ವಿವರಗಳಿಗಾಗಿ- 9448857102.