ಶಿವಮೊಗ್ಗ: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ 2015ನೇ ಶೈಕ್ಷಣಿಕ ಸಾಲಿನ ಏಪ್ರಿಲ್‌ನಲ್ಲಿ ನಡೆಸಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಂದ ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಮಾನ್ಯತೆ ಪಡೆದ ಅನುದಾನಿತ, ಅನುದಾನರಹಿತ ಶಾಲೆ, ಕಾಲೇಜುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಖಾಸಗಿ ಅಭ್ಯರ್ಥಿಗಳು ಮತ್ತು ಪುನರಾವರ್ತಿತ ಅಭ್ಯರ್ಥಿಗಳು ಶಾಲಾ, ಕಾಲೇಜುಗಳ ಮುಖಾಂತರ ಸದರಿ ಪರೀಕ್ಷೆಗೆ ಕುಳಿತುಕೊಳ್ಳಲು ಅರ್ಜಿಗಳನ್ನು ಶಾಲಾ-ಕಾಲೇಜುಗಳ ಮೂಲಕ ಸಲ್ಲಿಸಬಹುದಾಗಿದೆ. ಖಾಸಗಿ ಅಭ್ಯರ್ಥಿಗಳಾಗಿ ಪರೀಕ್ಷೆ ತೆಗೆದುಕೊಳ್ಳಲಿಚ್ಚಿಸುವ ವಿದ್ಯಾರ್ಥಿಗಳು ಹಿಂದೆ ವ್ಯಾಸಂಗ ಮಾಡದಿರುವ ಹಾಗೂ ಅರ್ಥದಲ್ಲಿಯೇ ವ್ಯಾಸಂಗ ಮೊಟಕುಗೊಳಿಸಿರುವ ಅಥವಾ 2015ರ ಮಾರ್ಚ್ 1ಕ್ಕೆ 15 ವರ್ಷ ವಯೋವುತಿ ಪೂರ್ಣಗೊಂಡಿರುವವರು ನೇರವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೇರವಾಗಿ ಹಾಜರಾಗಬಹುದು.
ಈ ಹಿಂದಿನ ವರ್ಷಗಳಲ್ಲಿ ಉಪನಿರ್ದೇಶಕರ ಕಚೇರಿಯಲ್ಲಿ ಹೆಸರು ನೋಂದಣಿ ಮಾಡಿಸಿಕೊಂಡಿದ್ದರೆ ಈ ಅರ್ಜಿಯ ಝೆರಾಕ್ಸ್ ಪ್ರತಿ ಲಗತ್ತಿಸಿ, ಪ್ರಸಕ್ತ ಸಾಲಿಗೆ ರು. 50 ರು. ಪಾವತಿಸಿ, ನವೀಕರಿಸಿಕೊಂಡು ಪರೀಕ್ಷೆಗೆ ಹಾಜರಾಗಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಹತ್ತಿರ ಶಾಲಾ ಕಾಲೇಜು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
Advertisement