ಭದ್ರಾವತಿ: ಭದ್ರಾ ಜಲಾಶಯದಲ್ಲಿ ಮಂಗಳವಾರ ಬೆಳಗಿನಿಂದ ಮಧ್ಯಾಹ್ನದ ವರೆಗೆ ಒಳಹರಿವು 48000 ಕ್ಯುಸೆಕ್‌ವರೆಗೆ ಹೆಚ್ಚಾದ ಕಾರಣ ಜಲಾಶಯದಿಂದ ಭದ್ರಾ ನದಿಗೆ ಹೆಚ್ಚಿನ ನೀರನ್ನು ಬಿಟ್ಟ ಕಾರಣ ಪಟ್ಟಣದ ಸಾರಿಗೆ ಬಸ್ ನಿಲ್ದಾಣ ಬಳಿ ಇರುವ ಸೇತುವೆ ಮೇಲೆ ನೀರು ಹರಿಯಲಾರಂಭಿಸಿತು. ಈ ಹಿನ್ನೆಲೆಯಲ್ಲಿ ಪೊಲೀಸರು ಮಂಗಳವಾರ ಬೆಳಗಿನಿಂದಲೇ ಸೇತುವೆ ಮೇಲೆ ವಾಹನ ಸಂಚಾರ ಹಾಗೂ ಜನಸಂಚಾರ ನಿರ್ಬಂಧಿಸಿದ್ದರು.
ಸೇತುವೆ ಮೇಲೆ ನದಿ ನೀರು ಹರಿಯುವುದನ್ನು ನೋಡಲು ಜನಸಾಗರ ಹರಿದುಬಂದ ಕಾರಣ ನಿಯಂತ್ರಿಸಲು ಪೊಲೀಸರು ಇಡೀ ದಿನ ಹರಸಾಹಸ ಪಡಬೇಕಾಯಿತು. ಸಂಜೆ ವೇಳೆಗೆ ಭದ್ರಾ ಜಲಾಶಯದ ಒಳಹರಿವು 38 ಸಾವಿರ ಕ್ಯುಸೆಕ್‌ಗೆ ಇಳಿಮುಖವಾದರೂ ಜಲಾಶಯದಲ್ಲಿ ನೀರಿನ ಮಟ್ಟವನ್ನು 184 ಅಡಿಗೆ ಕಾದಿರಿಸಿಕೊಳ್ಳಲು ಸಂಜೆಯೂ 46500 ಕ್ಯುಸೆಕ್ ನೀರನ್ನು ಭದ್ರಾ ನದಿಗೆ ಜಲಾಶಯದಿಂದ ಹರಿದು ಬಿಡಲಾಯಿತು. ರಾತ್ರಿ 7 ಗಂಟೆಯ ವೇಳೆಗೆ ಜಲಾಶಯದ ಮಟ್ಟ 184 ಅಡಿ 6 ಇಂಚು ಇದ್ದಿತು.
Advertisement