ಶಿರಾಳಕೊಪ್ಪ: ದಶಕಗಳಷ್ಟು ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದವರು ಮಾಡಲಾಗದ ಅಭಿವೃದ್ಧಿ ಕಾರ್ಯವನ್ನು ಯಡಿಯೂರಪ್ಪ ಅವರು ಕೇವಲ ತಮ್ಮ ಮೂರುವರೇ ವರ್ಷದ ಆಡಳಿತಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿ ತೋರಿಸಿದ್ದಾರೆ ಎಂದು ಶಿಕಾರಿಪುರ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ತಿಳಿಸಿದರು. ಶಿರಾಳಕೊಪ್ಪ ಹತ್ತಿರದ ಕ್ಯಾದಗಿಕೊಪ್ಪ ಮತ್ತು ಮಳೂರ ಗ್ರಾಮದಲ್ಲಿ ಬುಧವಾರ ಪ್ರಚಾರಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ತಾಲೂಕಿನಲ್ಲಿ ಕೆರೆ, ರಸ್ತೆ ಕಾಲುವೆಗಳ ಅಭಿವೃದ್ಧಿ ಮಾಡಲಾಗಿದೆ. ಆದರೂ ಇನ್ನೂ ಸಾಕಷ್ಟು ಕಾರ್ಯಗಳು ಬಾಕಿ ಇವೆ. ಅವುಗಳನ್ನು ಮುಂದಿನ ದಿನಗಳಲ್ಲಿ ಹಂತಹಂತವಾಗಿ ಮಾಡಲಾಗುವದು ಎಂದು ಹೇಳಿದರು.
ಮೊದಲಿಗೆ ಕ್ಯಾದಿಗಿ ಕೊಪ್ಪ ಮತ್ತು ಹೊಸಕೊಪ್ಪ ಗ್ರಾಮಗಳಲ್ಲಿ ಮನೆಮನೆಗೆ ತೆರಳಿ ರಾಘವೇಂದ್ರ ಮತಯಾಚಿಸಿದರು. ರಾಘವೇಂದ್ರ ಅವರೊಂದಿಗೆ ತಡಗಣಿ ಗ್ರಾಪಂ ಅಧ್ಯಕ್ಷ ಮಂಜುನಾಥ, ಮಾಜಿ ಶಾಸಕ ಮಹಲಿಂಗಪ್ಪ, ತೊಗರ್ಸಿ ಸಣ್ಣ ಹನುಮಂತಪ್ಪ, ತಾಪಂ ಮಾಜಿ ಅಧ್ಯಕ್ಷ ಕೆ.ರೇವಣಪ್ಪ, ಸುರೇಶ್‌ಗೌಡ, ತಾಪಂ ಮಾಜಿ ಸದಸ್ಯ ಸುಬ್ರಮಣ್ಯ ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ನಿವೇದಿತಾ ರಾಜು, ತಾಪಂ ಮಾಜಿ ಅಧ್ಯಕ್ಷೆ ಜ್ಯೋತಿ ರಮೇಶ್ ಇತರರು ಇದ್ದರು.
Advertisement