ಭದ್ರಾವತಿ: ಮೆಸ್ಕಾಂ ನಗರ ಉಪವಿಭಾಗ ವ್ಯಾಪ್ತಿಯಲ್ಲಿ ಗ್ರಾಹಕರ ಜನಸಂಪರ್ಕ ಸಭೆಯನ್ನು ಜೆಪಿಎಸ್ ಕಾಲೋನಿಯ ಘಟಕ-1ರ ಕಚೇರಿಯಲ್ಲಿ ಜು.29ರಂದು, ಬಸವೇಶ್ವರ ವೃತ್ತದಲ್ಲಿರುವ ಘಟಕ-2ರ ಕಚೇರಿಯಲ್ಲಿ ಜು.30ರಂದು ಹಾಗೂ ನ್ಯೂಟೌನ್ ಉಂಬ್ಳೇಬೈಲು ರಸ್ತೆಯ ಘಟಕ-3ರ ಕಚೇರಿಯಲ್ಲಿ ಜು.31ರಂದು ಬೆಳಗ್ಗೆ 10 ರಿಂದ 12.30ರ ವರೆಗೆ ನಡೆಸಲಾಗುವುದು.
ಗ್ರಾಹಕರು ಸಭೆಗೆ ಹಾಜರಾಗಲು ಹಾಗೂ ಸಲಹೆ, ಸೂಚನೆ ಅಥವಾ ದೂರುಗಳನ್ನು ಲಿಖಿತವಾಗಿ ಮುಂಚೆಯೇ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಮೆಸ್ಕಾಂ, ನಗರ ಉಪವಿಭಾಗ, ಉಂಬ್ಳೈಬೈಲು ರಸ್ತೆ, ಭದ್ರಾವತಿ ಇಲ್ಲಿಗೆ ಸಲ್ಲಿಸಬಹುದು.