ಸೊರಬ: ತಾಲೂಕಿನ ಪುಟ್ಟನಹಳ್ಳಿ ಸಾಗುವಾನಿ ನಡುತೋಪಿನಲ್ಲಿ ಭಾನುವಾರ ತಡ ರಾತ್ರಿ 10 ಸಾಗುವಾನಿ ಮರ ಕಡಿದು ಸಾಗಿಸಲಾಗಿದೆ. ಈ ಬಗ್ಗೆ ಆನವಟ್ಟಿ ವಲಯ ಅರಣ್ಯಾಧಿಕಾರಿ ಕೃಷ್ಣ ಅಣ್ಣಯ್ಯಗೌಡ, ಆರೋಪಿಗಳ ಹಾಗೂ ನಾಟಾ ಪತ್ತೆಗಾಗಿ 3 ತಂಡ ರಚಿಸಿ ಬಲೆ ಬೀಸಿದ್ದಾಗಿ ತಿಳಿಸಿದರು. ಈಗಾಗಲೇ ಹಾವೇರಿ ಜಿಲ್ಲೆಯ ಚಿಕ್ಕೇರಿಯಲ್ಲಿ ಸುಮಾರು 75 ಅಡಿ ನಾಟಾ ಪತ್ತೆ ಮಾಡಲಾಗಿದೆ. ಇದರ ಬೆಲೆ ಸುಮಾರು 1 ಲಕ್ಷ ಎಂದು ತಿಳಿಸಿದ್ದಾರೆ. ಇನ್ನು ಉಳಿದ ನಾಟಾಕ್ಕಾಗಿ ವ್ಯಾಪಕ ಶೋಧ ಮುಂದುವರಿದಿದೆ. ಇತ್ತ ಚಂದ್ರಗುತ್ತಿಯ ಪರಿಸರ ಚಿಂತಕಿ, ಹಿರಿಯ ಪತ್ರಕರ್ತೆ ಸುನಂದ ದೇಸಾಯಿ ಜಾಗೆಯಲ್ಲಿ ಪರಿಸರ ದೃಷ್ಟಿಯಿಂದ ಬೆಳೆಸಿದ್ದ ಎರಡು ಗಂಧದ ಮರ ಕದ್ದು ಸಾಗಿಸಿದ್ದಾರೆ.