ಸೊರಬ: ಹಿಂದಿನ ರಾಜಮಹಾರಾಜರು ಗಿಡ ನೆಡೋ ಕೆಲಸ ಮಾಡಿದರು. ಈಗಿನ ರಾಜಕಾರಣಿಗಳು ಗಿಡ ಕಡಿಯೋ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಸಮಾಜವಾದಿ ಹಿರಿಯ ಚಿಂತಕ ಎಂ.ಜಿ. ಸ್ವಾಧಿ ಹೇಳಿದರು.
ಚಂದ್ರಗುತ್ತಿ ರೇಣುಕಾಂಬ ಪ್ರೌಢಶಾಲೆಯಲ್ಲಿ ಅರಣ್ಯ ಇಲಾಖೆ, ಗ್ರಾಪಂ ಆಡಳಿತ ಹಾಗೂ ಶಾಲಾ ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ವನಮಹೋತ್ಸವ ದಲ್ಲಿ ಪಾಲ್ಗೊಂಡು ಮಾತನಾಡಿದರು. ಪರಿಸರ ಚಿಂತಕಿ ಸುನಂದಾ ದೇಸಾಯಿ ಮಾತನಾಡಿದರು.ಗ್ರಾಪಂ ಅಧ್ಯಕ್ಷೆ ಬಸಮ್ಮ ಗಿಡ ನೆಟ್ಟು ಕಾರ್ಯಕ್ರಮ ಉದ್ಘಾಟಿಸಿದರು. ಅರಣ್ಯ ಇಲಾಖೆ ಎಸಿಎಫ್ ಅನ್ವರ್ಖಾನ್, ಆರ್ಎಫ್ಒ ಅಜಯಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಅಂಗಡಿ ಚಂದ್ರಪ್ಪ, ಸದಸ್ಯ ಎಂ.ಪಿ. ರತ್ನಾಕರ್, ಮುಖಂಡ ಮಣ್ಣತ್ತಿ ಪರಮೇಶ್ವರ್, ಶಾಲಾ ಮುಖ್ಯಶಿಕ್ಷಕ ಬಿ.ಎಫ್. ಸುಳ್ಳಳ್ಳಿ, ಶಿಕ್ಷಕ ಯಶವಂತಪ್ಪ ಮಾತನಾಡಿದರು. ಸ್ಥಳೀಯ ಜೀವವೈವಿಧ್ಯತೆ ಕುರಿತಂತೆ ಶ್ರೀಪಾದ ಬಿಚ್ಚುಗತ್ತಿ ಉಪನ್ಯಾಸ ನೀಡಿದರು. ಶಾಲಾ ಮಕ್ಕಳಾದ ಶ್ವೇತಾ, ಸುಮಲತಾ, ರೇಖಾ, ಸಚಿನ್, ಸರ್ಫ್ರಾಜ್, ರೋಜಾ ಪರಿಸರ ಗೀತೆ, ಭಾಷಣ ದಲ್ಲಿ ಪಾಲ್ಗೊಂಡಿದ್ದರು.