ಸೊರಬ: ನಿರ್ವಹಣೆ ಮಾಡಲಾಗುವುದಿಲ್ಲ ಎಂದ ಮೇಲೆ ಕಾಣಿಕೆ ರೂಪದಲ್ಲಿ ಸ್ವೀಕರಿಸಲು ಮುಂದಾಗಬೇಡಿ ಎಂದು ಚಂದ್ರಗುತ್ತಿ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ, ನಡೆಯಬೇಕಿದ್ದ ಜಾನುವಾರು ಹರಾಜು ಪ್ರಕ್ರಿಯೆಯನ್ನು ತಡೆಹಿಡಿದರು.
ಮುಜರಾಯಿ ಇಲಾಖೆಗೆ ಒಳಪಟ್ಟ ಇಲ್ಲಿನ ರೇಣುಕಾಂಬ ದೇಗುಲದ ಕಾಣಿಕೆ ಜಾನುವಾರುಗಳ ಹರಾಜು ಪ್ರಕ್ರಿಯೆ ಮಂಗಳವಾರ ನಡೆಸ ಬೇಕಾಗಿತ್ತು.
ಈ ರೀತಿ ಹರಾಜುನಲ್ಲಿ ಕಡಿಮೆ ಬೆಲೆಗೆ ಹರಾಜು ಹಿಡಿದ ಗೋವುಗಳನ್ನು ಕಸಾಯಿಖಾನೆಗೆ ಕಳುಹಿಸಲಾಗುತ್ತಿದೆ ಎಂಬ ಆರೋಪ ಗ್ರಾಮಸ್ಥರದ್ದಾಗಿದೆ. ಈ ಹಿನ್ನಲೆಯಲ್ಲಿ ಅವರು, ಕಾಣಿಕೆಯಾಗಿ ಪಡೆದ ಗೋವುಗಳನ್ನು ಕಸಾಯಿ ಖಾನೆಗೆ ಕಳಿಸುವುದಲ್ಲ, ಸಾಧ್ಯವಾದರೆ ದೇಗುಲ ಸಮಿತಿಯೇ ಅಂತಹ ಹಸು, ಕರುಗಳನ್ನು ಸಾಕಬೇಕು. ಗ್ರಾಮಸ್ಥರಿಗೆ ಇಚ್ಚೆ ಇದ್ದಲ್ಲಿ ಒಪ್ಪಂದ ಮಾಡಿ ಕೊಂಡು ಸಾಕಿ, ಸಲುಹುವ ಉದ್ದೇಶವಿರಿಸಿ ಅವರಿಗೆ ನೀಡಬೇಕು. ಇಲ್ಲವೆ ಯಾವುದಾದರೂ ಗೋಶಾಲೆಗೆ ಕಳುಹಿಸಬೇಕು. ಹಣದಾಸೆಗೆ ಜಾನುವಾರು ಬಲಿ ಕೊಡುವುದನ್ನು ನಾವು ಸಹಿಸುವುದಿಲ್ಲ ಎಂದು ಪಟ್ಟು ಹಿಡಿದು ಹರಾಜು ನಿಲ್ಲಿಸಿದರು.
ಗ್ರಾಮದ ಮುಖಂಡ ಪ್ರಸನ್ನಶೇಟ್, ಅಪ್ರಮೇಯಭಟ್, ಎಂ.ಕುಮಾರ್, ಪರುಶರಾಮಬೋವಿ, ಚೇತನ, ಪ್ರಕಾಶ್, ಗಣಪತಿ, ಶ್ಯಾಮ್, ಪ್ರಭಾಕರ ಶೇಟ್, ರತ್ನಾಕರ್, ಶಶಿಕಲಾ ಮುಂತಾದವರು ಇದ್ದರು