ಹೊನ್ನಾಳಿ: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕು ರೈತ ಸಂಘದ ನೇತೃತ್ವದಲ್ಲಿ ಜೂ.30 ರಂದು ಬೆಳಗ್ಗೆ 11 ಗಂಟೆಗೆ ರಾಜ್ಯಮಟ್ಟದ ರೈತರ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ ಎಂದು ರೈತ ಸಂಘದ ಹೊನ್ನಾಳಿ ತಾಲೂಕು ಘಟಕದ ಅಧ್ಯಕ್ಷ ಎಚ್.ನಾಗರಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಾದಾಮಿಯ ಪಿಎಲ್ಡಿ ಬ್ಯಾಂಕ್ ಆವರಣದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಬಾದಾಮಿ ನವಗ್ರಹ ಹಿರೇಮಠದ ಶ್ರೀಶಿವಪೂಜಾ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುವರು. ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಎಲ್. ಲಕ್ಷ್ಮಿನಾರಾಯಣಗೌಡ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕಿರುತೆರೆ ನಟ ಹಾಗೂ ರೈತ ಸಂಘದ ರಾಜ್ಯ ಸಂಚಾಲಕ ಸಂತೋಷರಾಜ ಬಿ.ಜಾವರೆ ಭಾಗವಹಿಸಲಿದ್ದಾರೆ. ಹೊನ್ನಾಳಿ ತಾಲೂಕಿನ ರೈತರು 29 ರಂದು ರೈಲಿನ ಪ್ರಯಾಣಕ್ಕೆ ಹರಿಹರ ಅಥವಾ ದಾವಣಗೆರೆ ರೇಲ್ವೆ ನಿಲ್ದಾಣಕ್ಕೆ ಅಗಮಿಸಬೇಕು. ಮಾಹಿತಿಗೆ ಮೊ.9483561164ಗೆ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬೇಕು ಎಂದರು. ವಾಸನದ ಓಂಕಾರಪ್ಪ, ಎಂ.ಬಸವರಾಜಪ್ಪ, ಕೆ.ಸಿ.ಬಸವರಾಜಪ್ಪ ಇತರರು ಇದ್ದರು.