ಸಾಗರ: ಶಿಕಾರಿಪುರ, ಸಾಗರ, ಹೊಸನಗರ ಮತ್ತು ಸೊಬರ ತಾಲೂಕಿನ ಆಯಾ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಯಲ್ಲಿ ಬರುವ ಗ್ರಾಮಗಳ ಬೆಳೆ ಸಾಲ ಪಡೆಯದ ರೈತರಿಗೆ ಬೆಳೆ ವಿಮೆ ಯೋಜನೆಯನ್ನು ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ಕಲ್ಪಿಸಲು ಉದ್ದೇಶಿಸಲಾಗಿದೆ.
ಇಚ್ಛೆಯುಳ್ಳ ರೈತರು ವಿಮಾ ಕಂತು ಭರಿಸಿ ಸೌಲಭ್ಯ ಪಡೆಯಲು ಪಹಣಿ, ಬ್ಯಾಂಕ್ ಉಳಿತಾಯ ಖಾತೆ ಪಾಸ್ ಪುಸ್ತಕ ಮತ್ತು ಬಿತ್ತನೆ ಪ್ರಮಾಣಪತ್ರದ ನಕಲು ಪ್ರತಿ ಹಾಗೂ ಕಂದಾಯ ರಶೀದಿಯೊಂದಿಗೆ ಆಯಾ ಹೋಬಳಿಯ ಆಯ್ದ ಗ್ರಾಮ ಪಂಚಾಯಿತಿ ಕಚೇರಿ ಹಾಗೂ ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ, ಜೆ.ಸಿ. ರಸ್ತೆ, (ಮೊ. 9449075397) ಅಥವಾ ಸಾಗರ, ಸೊರಬ, ಹೊಸನಗರ ಹಾಗೂ ಶಿಕಾರಿಪುರದ ಸಹಾಯಕ ಕೃಷಿ ನಿರ್ದೆಶಕರ ಕಚೇರಿ ಸಂಪರ್ಕಿಸಲು ಕೋರಲಾಗಿದೆ.