ಸೊರಬ: ಯುವಜನತೆಯು ಮಾದಕ ದ್ರವ್ಯ ವ್ಯಸನದಿಂದ ಹೊರಬರುವಲ್ಲಿ ಪೋಷಕರ ಪಾತ್ರ ಮಹತ್ವದ್ದು ಎಂದು ಆನವಟ್ಟಿ ಪ್ರಭಾರ ಠಾಣಾಧಿಕಾರಿ ನೀಲಾನಾಯ್ಕ ತಿಳಿಸಿದರು. ಆನವಟ್ಟಿ ಬಸ್ ನಿಲ್ದಾಣದಲ್ಲಿ ಅಂತರ್ ರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಾಜಿ ಗ್ರಾಪಂ ಅಧ್ಯಕ್ಷ ದಯಾನಂದ ಗೌಡ ಮಾತನಾಡಿ, ಸಮಾಜದಲ್ಲಿ ವ್ಯಸನಿಗಳ ಪ್ರಮಾಣ ಹೆಚ್ಚಾಗುತ್ತಿದ್ದು, ಮಾರುಕಟ್ಟೆಯಲ್ಲಿ ಮಾದಕ ವಸ್ತುಗಳು ಎಲ್ಲಿಯವರೆಗೆ ಸಿಗುತ್ತದೆಯೋ ಅಲ್ಲಿಯವರೆಗೂ ವ್ಯಸನಿಗಳ ಪ್ರಮಾಣ ಹೆಚ್ಚುತ್ತಲೇ ಹೋಗುತ್ತದೆ. ವಿದ್ಯಾರ್ಥಿಗಳು ತಾವು ದುಶ್ಚಟಗಳಿಂದ ದೂರಾಗುವುದರೊಂದಿಗೆ ತಮ್ಮ ವ್ಯಸನಿ ಮಿತ್ರರನ್ನು ದೂರಮಾಡಿ ಎಂದು ಕರೆ ನೀಡಿದರು. ಗ್ರಾಮಸ್ಥ ಶ್ರೀಧರಾಚಾರ್ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷೆ ಗಿರಿಜಮ್ಮ, ಅನ್ವರ್ ಸಾಬ್, ವಿಷಕಂಠ ಮಾಲತೇಶ, ಕಾಶಿನಾಥ, ಕೃಷ್ಣ, ಬಸವರಾಜ, ಭರ್ಮಪ್ಪ, ಸಂತೋಷ, ಮಂಜುನಾಥ, ನವೀನ್, ಮಣಿಕಂಠ, ಮನೋಜ್, ಪ್ರಶಾಂತ ಕುಬಟೂರು, ಶಂಕರ್ ಗೌಳಿ, ಬಸವರಾಜ ಗೌಳಿ, ಗಂಗಾಧರ ಗೌಳಿ, ಮತ್ತಿತರರು ಹಾಜರಿದ್ದರು.