ಹಲಸಿನ ಕಡುಬು ಹಬ್ಬ ಆಚರಣೆ

Updated on: 

ಸೊರಬ:  ಮಲೆನಾಡಿನ ವಿಶಿಷ್ಟ ಆಚರಣೆ ಹಲಸಿನ ಕಡುಬು ಹಬ್ಬ ತಾಲೂಕಿನ ಕೆಲವೆಡೆ ಶನಿವಾರ ಜರುಗಿತು. ಹೆಚ್ಚಾಗಿ ಕರೆ ಒಕ್ಕಲಿಗ ಸಮುದಾಯದವರು ಆಚರಿಸುವ ಈ ಹಬ್ಬ ಇಲ್ಲಿನ ಕಾರೆಹೊಂಡ, ಯಕ್ಷಿ, ಕಮರೂರು ಗ್ರಾಮಗಳಲ್ಲಿ ನಡೆದಿದೆ. ಕಾಡಿಗೆ ಹೋಗಿ ಗುಡ್ಡೆಗೇರು ಎಲೆ ತಂದು ಹಲಸಿನ ಹಣ್ಣು, ಅಕ್ಕಿ, ಬೆಲ್ಲ ಮಿಶ್ರ ಮಾಡಿ, ಎಲೆಯಲ್ಲಿ ಕಟ್ಟಿ ಬೇಯಿಸುವ ವಿಶಿಷ್ಟ ಖಾದ್ಯವನ್ನು ತಯಾರಿಸಿ, ಸರಳ ಪೂಜೆ ಮೂಲಕ ಹಲಸಿನ ಹಣ್ಣಿನ ಹಬ್ಬ ಆಚರಿಸುತ್ತಾರೆ.
ರಸ್ತೆ, ಚರಂಡಿ ಸ್ವಚ್ಛತೆಗೆ ಆಗ್ರಹ
ಸೊರಬ:  ಮಳೆಗಾಲದ ದಿನದ ಆರಂಭಕ್ಕೆ ಮುನ್ನವೆ ಗ್ರಾಮದ ರಸ್ತೆ ಚರಂಡಿಗಳನ್ನು ಸ್ವಚ್ಛಗೊಳಿಸಿ ಎಂದು ಮನವಿ ಮಾಡಿದ್ದಾಗ್ಯೂ ಗ್ರಾಪಂ ಆಡಳಿತ ತಲೆಕೆಡಿಸಿಕೊಂಡಿಲ್ಲ. ಇಲ್ಲಿನ ಮುಖ್ಯ ರಸ್ತೆ ಚರಂಡಿ ವರ್ಷಾವಧಿ ತುಂಬಿ ತುಳುಕುತ್ತಿದ್ದು, ಇಲ್ಲಿನ ನಿವಾಸಿಗಳು, ಬಸ್‌ಗಾಗಿ ಕಾಯುವ ಪ್ರಯಾಣಿಕರು ಮೂಗು ಮುಚ್ಚಿಕೊಂಡ ಕೂರಬೇಕಾಗುತ್ತದೆ. ಪ್ರಸ್ತುತ ಇಲ್ಲಿನ ಹರೀಶಿ ರಸ್ತೆಯ ಅರಳೀಕಟ್ಟೆ ಸರ್ಕಲ್ ಬಳಿ ಕಾಲುವೆಗಳು ಹೂಳು ತುಂಬಿ ಮುಚ್ಚಿಹೋಗಿದ್ದು, ಹೂಳು ತೆರವುಗೊಳಿಸಬೇಕು ಜಗದೀಶ, ರವಿ, ರಾಜೇಶ, ಆದರ್ಶ, ಬಂಗಾರ್ಯ, ಗಿರೀಶ್ ಶೇಟ್ ಮೊದಲಾದವರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com