ಕುಣಿಗಲ್: ಪಟ್ಟಣದ ವ್ಯಾಪ್ತಿಯಲ್ಲಿ ಬೆಸ್ಕಾಂ ಉಪವಿಭಾಗದಿಂದ ಕೇಂದ್ರ ಸರ್ಕಾರದ ಯೋಜನೆಯಡಿ ಆರ್ಎಪಿಡಿಆರ್ ಕಾರ್ಯಕ್ರಮದಡಿಯಲ್ಲಿ , ವಿದ್ಯುತ್ ಪರಿವರ್ತಕಗಳನ್ನು ಮೇಲ್ದರ್ಜೆಗೆ ಏರಿಸುವುದು, ಮುರಿದ ಕಂಬ ಬದಲಾವಣೆ ಸೇರಿದಂತೆ ಹಳೆಯ ತಂತಿಗಳ ಬದಲಾವಣೆ ಕಾಮಗಾರಿಗಳನ್ನು ಇದೇ ಮಾಹೆಯ 4ರಿಂದ ಮಾರ್ಚ್ 15ನೇ ತಾರಿಕಿನವರೆಗೂ ಕೈಗೊಳ್ಳಲಿರುವುದರಿಂದ ಅಂದಾನಯ್ಯ ಬಡಾವಣೆ, ತುಮಕೂರುರಸ್ತೆ, ಬಿಎಂ ರಸ್ತೆ, ರಾಜಕುಮಾರನಗರ, ಚೌಡೇಶ್ವರಿಬೀದಿ, ಮಹಾವೀರನಗರ, ದೊಡ್ಡಪೇಟೆ, ಉಪ್ಪಾರರ ಬೀದಿ, ಗುಜಾರಿ ಮೊಹಲ್ಲಾ, ಕೋಟೆ, ಕೆಎಚ್ಬಿ ಕಾಲೋನಿ, ಆಶ್ರಯಕಾಲೋನಿ, ಜನತಾ ಕಾಲೋನಿ, ಮಲ್ಲಾಘಟ್ಟ, ಬಿದನಗೆರೆ, ಅಂಬೇಡ್ಕರ್ನಗರ, ಕೆಆರ್ಎಸ್ ಅಗ್ರಹಾರ, ಬ್ಯಾಂಕ್ ಕಾಲೋನಿ, ಮಲ್ಲಿಪಾಳ್ಯ ಸೇರಿದಂತೆ ಡಿ ಗ್ರೂಪ್ ಬಡಾವಣೆಗಳಲ್ಲಿ ಬೆಳಗ್ಗೆ 9ಗಂಟೆಯಿಂದ ಸಂಜೆ ಆರು ಗಂಟೆವರೆಗೂ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸುವಂತೆ ಬೆಸ್ಕಾಂ ಎಇಇ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಉಮಾರಾಣಿ ಅಧಿಕಾರ ಸ್ವೀಕಾರ
ಕುಣಿಗಲ್: ಕುಣಿಗಲ್ ಪೊಲೀಸ್ ಉಪವಿಭಾಗದ ಇತಿಹಾಸದಲ್ಲೆ ಮೊದಲ ಬಾರಿಗೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಡಿವೈಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಡಿವೈಎಸ್ಪಿ ಶಿವರುದ್ರಸ್ವಾಮಿ ವಯೋ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಉಮಾರಾಣಿಯವರು ಡಿವೈಎಸ್ಪಿಯಾಗಿ ನೇಮಕಗೊಂಡಿದ್ದು ಶನಿವಾರ ಸಂಜೆ ಅಧಿಕಾರ ಸ್ವೀಕರಿಸಿದ್ದಾರೆ.
ಬಹಿರಂಗ ಹರಾಜಿಗೆ ಕ್ರಮ
ಕುಣಿಗಲ್: ತಾಲೂಕಿನ ಶಿಂಷಾ ನದಿಪಾತ್ರದಲ್ಲಿನ ಹನುಮಂತನಗರ, ತೊರೆಬೊಮ್ಮನಹಳ್ಳಿ ಹಾಗೂ ಕೊಡವತ್ತಿ ಗ್ರಾಮಗಳಲ್ಲಿ ಅಕ್ರಮ ಮರಳುಗಾರಿಕೆ ಸಂಬಂಧಿಸಿದಂತೆ, ನೂತನ ಮರಳು ನೀತಿ ಅನ್ವಯ ಲೋಕೋಪಯೋಗಿ ಇಲಾಖೆ ವಶದಲ್ಲಿರುವ ಮರಳನ್ನು, ಇದೇ 4ರ ಸೋಮವಾರದಂದು ಬಹಿರಂಗ ಹರಾಜಿಗೆ ಕ್ರಮ ಕೈಗೊಳ್ಳಲಾಗಿದೆ. ಆಸಕ್ತ ಮರಳು ಖರೀದಿದಾರರು, ಕ್ಯುಬಿಕ್ ಮೀಟರ್ ಒಂದಕ್ಕೆ 950ರು. ನಂತೆ ಡಿಡಿ ಪಡೆದು, ಬಹಿರಂಗ ಹರಾಜಿನಲ್ಲಿ ಪಾಲ್ಗೊಳ್ಳುವಂತೆ ಲೋಕೋಪಯೋಗಿ ಇಲಾಖೆಯ ಎಇಇ ಅವರು ಮನವಿ ಮಾಡಿದ್ದಾರೆ.