ತುಮಕೂರು: ಮಾರುಕಟ್ಟೆಯಿಂದ ಹೂ ತರಲು ಹೋದ ಯುವತಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ.
ಶಿಲ್ಪ ಎಂಬ 18 ವರ್ಷದ ತಮ್ಮ ಮಗಳು ತುಮಕೂರು ನಗರದ ಮಾರುಕಟ್ಟೆಯಿಂದ ಹೂವನ್ನು ತಂದು ಹೂವಿನ ವ್ಯಾಪಾರ ಮಾಡುತ್ತಿದ್ದು, ಎಂದಿನಂತೆ ಜನವರಿ 1 ರಂದು ತುಮಕೂರು ಮಾರುಕಟ್ಟೆಯಿಂದ ಹೂವನ್ನು ತರುವುದಾಗಿ ಮನೆಯಿಂದ ಮಧ್ಯಾಹ್ನ ಹೋದವಳು ಸಾಯಂಕಾಲವಾದರೂ ಮನೆಗೆ ಹಿಂದಿರುಗಿರುವುದಿಲ್ಲವೆಂದು ಈಕೆಯ ತಾಯಿ ಜಯಮ್ಮ ಎಂಬುವರು ಠಾಣೆಗೆ ದೂರು ನೀಡಿದ್ದಾರೆ. ಯುವತಿ ಪತ್ತೆಯಾದಲ್ಲಿ ಗ್ರಾಮಾಂತರ ಠಾಣೆ 0816-2278380 ಸಂಪರ್ಕಿಸಲು ಕೋರಿದೆ.