ಕೋಡಿ ಈರಪ್ಪಸ್ವಾಮಿ ಉತ್ಸವಕ್ಕೆ ಚಾಲನೆ

Updated on: 





ತುಮಕೂರು:  ಐತಿಹಾಸಿಕ ಹಿನ್ನೆಲೆಯ ಹುಳಿಗೆರೆ ಕೋಡಿ ಈರಪ್ಪಸ್ವಾಮಿ ಉತ್ಸವ ಆರಂಭವಾಗಿದೆ. ಸುಮಾರು 150 ವರ್ಷಗಳ ಹಿಂದೆ ನಡೆದಿತ್ತು ಎನ್ನಲಾದ ಬಂಡಿಯಾತ್ರೆ ಉತ್ಸವ ಈ ಬಾರಿ ವಿದ್ಯುಕ್ತವಾಗಿ ಆರಂಭವಾಗಿದ್ದು ಇದೇ ತಿಂಗಳ 16ರವರೆಗೆ ನಡೆಯಲಿದೆ.
ಫೆ.7ರಂದು ಎಲೆಪೂಜೆ, ಹಾಲು ಮತ್ತು ಅಕ್ಕಿ ಮೀಸಲು ಸಂಗ್ರಹ ಕಾರ್ಯ ನಡೆಯುವುದು. 8ರಂದು ಆಯುಧ ಪೂಜೆ ಮತ್ತು ಸಂಜೆ ಅನ್ನ ಸಂತರ್ಪಣೆ ಆಯೋಜಿಲಾಗಿದೆ. ಮರುದಿನ ಮುಂಜಾನೆ ದೇವಸ್ಥಾನದಿಂದ ಬುಡಕಟ್ಟಿನ 5 ಬಂಡಿಗಳೊಂದಿಗೆ ಸ್ವಾಮಿಯ ಮೆರವಣಿಗೆ ಆಂಧ್ರದ ಮಡಕಶಿರಾ ತಾಲೂಕಿನ ಈಚಲಡ್ಡಿಗೆ ಯಾತ್ರೆ ಆರಂಭಿಸಲಿದೆ.
ಆಂಧ್ರದ ದೊಕ್ಕಲಹಳ್ಳಿ, ಮುತ್ತೇನಹಳ್ಳಿ ಮಾರ್ಗವಾಗಿ ಸಾಗುವ ಯಾತ್ರೆ ಮಧುಗಿರಿ ತಾಲೂಕಿನ ಬೇಡತ್ತೂರು ಚನ್ನಿಗರಾಯಸ್ವಾಮಿಯ ಪೌಳಿಯನ್ನು ತಲುಪಿ ಅಲ್ಲಿ ಯಾತ್ರೆ ಬೀಡು ಬಿಡಲಿದೆ. ಈ ಸಂದರ್ಭದಲ್ಲಿ ಈ ಭಾಗದ ಭಕ್ತರಿಂದ ಸಾಮೂಹಿಕ ಅನ್ನಸಂತರ್ಪಣೆ ಆಯೋಜಿಸಲಾಗಿದೆ.
ಇಲ್ಲಿಂದ ಆಂಧ್ರದ ಈರಮಾಳಮ್ಮನ ಸನ್ನಿಧಿ ಈಚಲಡ್ಡಿಗೆ ಬಂದು ತಲುಪುವ ಯಾತ್ರೆ ಸೋಮವಾರ ಬೆಳಿಗ್ಗೆ ಜಲಧಿ ಪೂಜೆ ಮುಗಿಸಿ ಹುಳಿಗೆರೆಯ ಪೌಳಿಗೆ ವಾಪಾಸಾಗಲಿದೆ. ಈ ವೇಳೆಗೆ ಗಿಡಗನಹಳ್ಳಿ ಮತ್ತು ಕೊಟ್ಟದ ರಂಗನಾಥಸ್ವಾಮಿಯ ಮೆರವಣಿಗೆಯೂ ಕೂಡ ಇಲ್ಲಿ ಸಂಗಮಗೊಳ್ಳಲಿದ್ದು, ಮೂರು ದಿನಗಳ ಕಾಲ ಪರಿಷೆ ನಡೆಯಲಿದೆ. ಫೆ.13 ರಿಂದ 15 ರವರೆಗೆ ನೂತನವಾಗಿ ನಿರ್ಮಿಸಿರುವ ದೇವಾಲಯದಲ್ಲಿ ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಜರುಗಲಿವೆ.
ಪಟ್ಟನಾಯಕನಹಳ್ಳಿ ಮಠದ ನಂಜಾಧೂತಶ್ರೀ, ಎಲೆರಾಂಪುರದ ಹನುಮಂತನಾಥ ಸ್ವಾಮೀಜಿ ಮತ್ತು ಹೊಸದುರ್ಗದ ಶಾಂತವೀರ ಸ್ವಾಮೀಜಿ ಧಾರ್ಮಿಕ ಕಾರ್ಯ ನಡೆಸಿಕೊಡಲಿದ್ದಾರೆ. ಶಿರಾ ಶಾಸಕ ಟಿ.ಬಿ.ಜಯಚಂದ್ರ, ಬೆಂಗಳೂರು ವಿಜಯನಗರ ಶಾಸಕ ಎಂ.ಕೃಷ್ಣಪ್ಪ, ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ ಹಾಗೂ ಮೇಲ್ಮನೆ ಸದಸ್ಯ ವೈ.ಎ. ನಾರಾಯಣಸ್ವಾಮಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
16ರಂದು ಕೋಡಿ ಈರಪ್ಪಸ್ವಾಮಿಯ ಮೆರವಣಿಗೆ ಉತ್ಸವ ದೇವಸ್ಥಾನ ಪ್ರವೇಶಿಸುವುದರೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ ಎಂದು ಉತ್ಸವ ಆಚರಣಾ ಸಮಿತಿ ಮುಖ್ಯಸ್ಥ ಎಚ್.ಎಂ. ನಾರಾಯಣಗೌಡ, ಎಚ್.ಎಸ್. ತಿಮ್ಮಣ್ಣ ಹಾಗೂ ಎಚ್.ಇ. ರಂಗನಾಥ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com