ತುರುವೇಕೆರೆ: ಇಲ್ಲಿಯ ದೇವೇಗೌಡ ಬಡಾವಣೆಯಲ್ಲಿ ಮೂರು ಮನೆಗಳಿಗೆ ಆಕಸ್ಕಿಕ ಬೆಂಕಿ ತಗುಲಿ ಮನೆಯಲ್ಲಿದ್ದ ಹಲವಾರು ಪದಾರ್ಥಗಳು ಬೆಂಕಿಗೆ ಆಹುತಿಯಾಗಿದ್ದವು. ಮನೆಯೂ ಬಹುಪಾಲು ಬೆಂಕಿಗೆ ಸಲುಕಿ ಹಾನಿಗೊಳಗಾಗಿದ್ದವು. ಇವುಗಳ ವೀಕ್ಷಣೆ ಮಾಡಲು ಬಂದಿದ್ದ ಕೆಜೆಪಿ ಮುಖಂಡ ಮಸಾಲಾ ಜಯರಾಂ ಅವರು ಬೆಂಕಿಗೆ ಸಿಲುಕಿ ಮನೆಯನ್ನು ಕಳೆದು ಕೊಂಡಿದ್ದ ಅಕ್ಬರ್, ಮುಬಾರಕ್, ಹಾಗೂ ರಾಮಣ್ಣ ನವರಿಗೆ ತಲಾ 5 ಸಾವಿರ ರು.ಗಳ ಪರಿಹಾರ ನೆರವು ನೀಡಿದರು. ಕೆಜೆಪಿಯ ಮುಖಂಡ ನದೀಂ, ಮಹೇಶ್, ಸೋಮಶೇಖರ್ ಇದ್ದರು.
ಸರ್ಕಾರಕ್ಕೆ ಶಾಸಕರ ಅಭಿನಂದನೆ
ತುರುವೇಕೆರೆ: ತಾಲೂಕಿನಲ್ಲಿ ಕುಡಿಯುವ ನೀರಿನ ಬವಣೆಯಿಂದ ಹಾಗೂ ನೀರಾವರಿಯಿಂದ ವಂಚಿತವಾಗಿದ್ದ ಅಮ್ಮಸಂದ್ರ ಹಾಗೂ ಮುದ್ದನಹಳ್ಳಿಗೆ ಏತ ನೀರಾವರಿ ಯೋಜನೆಯನ್ನು ಸರ್ಕಾರ ಮಂಜೂರು ಮಾಡಿದೆ ಎಂದು ತಿಳಿಸಿರುವ ಶಾಸಕ ಎಂ.ಟಿ.ಕೃಷ್ಣಪ್ಪ ತಾಲೂಕಿನ ಜನತೆಯ ಪರವಾಗಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ.
ಜಾತ್ರಾ ಮಹೋತ್ಸವ
ಶಿರಾ: ತಾಲೂಕಿನ ಹೂವಿನ ತೇರಿಗೆ ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಶ್ರೀ ಕಂಬದ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ಮಾಗೋಡು ಗ್ರಾಮದಲ್ಲಿ ಫೆ. 23 ರಿಂದ ಮಾರ್ಚಿ 2 ವರೆಗೆ ನಡೆಯಲಿದೆ.