ತುಮಕೂರು: ಜಿಲ್ಲೆಯ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಜಿಲ್ಲಾ ಉಪಾಧ್ಯಕ್ಷ ಎಂ.ಪಿ. ಮಧುಸೂದನ್, ಜಿಲ್ಲಾ ನಿರ್ದೇಶಕ ಎಸ್.ಕೆ. ಅಶ್ವಥಯ್ಯ, ಟಿ.ಎಸ್. ಮಂಜುನಾಥ್, ಕೊರಟಗೆರೆ ತಾಲೂಕು ಅಧ್ಯಕ್ಷ ಗಂಗರಂಗಯ್ಯ ಹಾಗೂ ಜಿಲ್ಲಾಧ್ಯಕ್ಷ ಎ. ಮಹಾಲಿಂಗಯ್ಯ ನೇತೃತ್ವದಲ್ಲಿ ಮಧುಗಿರಿ ತಾಲೂಕು ಶಾಖೆ ಅಸ್ತಿತ್ವಕ್ಕೆ ಬಂದಿದೆ. ಗೌರವಾಧ್ಯಕ್ಷರಾಗಿ ವಡೇರಹಳ್ಳಿ ತಿಮ್ಮರಾಜು, ಅಧ್ಯಕ್ಷರಾಗಿ ರಾಮಚಂದ್ರಪ್ಪ, ಉಪಾಧ್ಯಕ್ಷರಾಗಿ ರಂಗನಾಥ್, ನಾಗರಾಜು, ಕಾರ್ಯಾಧ್ಯಕ್ಷರಾಗಿ ಬಿ. ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣಮೂರ್ತಿ, ಕಾರ್ಯದರ್ಶಿಯಾಗಿ ಮಂಜುನಾಥ್, ಸಹ ಕಾರ್ಯದರ್ಶಿಯಾಗಿ ಶಿವಶಂಕರ್, ಸಂಘಟನಾ ಕಾರ್ಯದರ್ಶಿಯಾಗಿ ರವಿ, ಮಂಜುನಾಥ್ ಎಚ್.ಎಂ., ಮಾರುತೇಶ್ ಹಾಗೂ ಖಜಾಂಚಿಯಾಗಿ ಜಿ. ರಂಗರಾಜು ನೇಮಕಗೊಂಡಿದ್ದಾರೆ. ಹಾಗೆಯೇ ಸದಸ್ಯರಾಗಿ 12 ಮಂದಿ ನೇಮಕಗೊಂಡಿದ್ದಾರೆ.