ಮಧುಗಿರಿ: ಇಂದು ವಿಶ್ವ ಪ್ರಸಿದ್ಧ ಸಾಧನಕರ ಸಾಲಿನಲ್ಲಿರುವ ಇನ್ಪೋಸಿಸ್ ನಾರಾಯಣಮೂರ್ತಿ, ವಿಪ್ರೋದ ಅಜೀಂ ಪ್ರೇಮಜೀ ಮತ್ತಿತರರು ಗುರಿ ಮುಟ್ಟುವವರಗೆ ತಮ್ಮ ಪ್ರಯತ್ನ ಮಾಡುತ್ತಲೇ ಬಂದವರು ಎಂದು ಚಲನಚಿತ್ರ ನಿರ್ಮಾಪಕ ಮುರುಳೀಧರ ಹಾಲಪ್ಪ ತಿಳಿಸಿದರು.
ಇತ್ತಿಚೆಗೆ ಇಲ್ಲಿನ ಚಿರೆಕ್ ಪಬ್ಲಿಕ್ ಶಾಲೆ ವತಿಯಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹಾಗಾಗಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದಿ ಮುಂದೆ ಬರಬೇಕು. ಸಾಧನೆ ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿ ಪ್ರೇರಣೆ ನೀಡಿಬೇಕು. ವಿದ್ಯೆ ಮನುಷ್ಯನನ್ನು ಬಾಳಿ ಬೆಳಸುತ್ತದೆ. ಎತ್ತರಕ್ಕೆ ಬೆಳದ ವ್ಯಕ್ತಿ ಸಮಾಜದ ಪ್ರಗತಿ, ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ರೋಟರಿ ಮಾಜಿ ಅಧ್ಯಕ್ಷ ಎಚ್.ಕೆ.ವಿ.ರೆಡ್ಡಿ ಎಲ್ಲರೂ ಸೇವಾ ಮನೋಭಾದಿಂದ ಸಮಾಜ ಮತ್ತು ದೇಶ ಪ್ರಗತಿಗೆ ನೆರವಾಗಬೇಕು. ಎಲ್ಲ ದಾನಕ್ಕಿಂತ ವಿದ್ಯಾದಾನ ಶ್ರೇಷ್ಠವಾದುದು ಎಂದರು.
ಸಂಸ್ಥಾಪಕ ಅಧ್ಯಕ್ಷ ಭಾಸ್ಕರರೆಡ್ಡಿ ಪೋಷಕರು ಮಕ್ಕಳಿಗೆ ಆಸ್ತಿ ಮಾಡುವುದು ಬೇಡ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂಬಂತೆ ಸಂಸ್ಕಾರಯುತ ಶಿಕ್ಷಣ ಕಲಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಹಾಗೆಯೇ ಸಾಧಕರ ಸಾಧನೆಗಳನ್ನು ಮೈಗೊಡಿಸಿಕೊಂಡು ಉತ್ತಮ ಗುಣಮಟ್ಟದ ಶಿಕ್ಷಣ ಕಲಿಯುವಂತೆ ಮಕ್ಕಳಿಗೆ ಕರೆಯಿತ್ತರು. ಪ್ರಾಂಶುಪಾಲ ಶೈಲಶ್ರೀ ಭಾಸ್ಕರರೆಡ್ಡಿ, ಮುಖ್ಯ ಶಿಕ್ಷಕ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.