ಕೊರಟಗೆರೆ: ಪಟ್ಟಣ ಮುಖಾಂತರ ಹಾದು ಹೋಗಿರುವ ಮುಖ್ಯ ರಸ್ತೆ ಕಾಮಗಾರಿ ಗುಣಮಟ್ಟವನ್ನು ಪರಿಶೀಲಿಸುವುದರೊಂದಿಗೆ ಸ್ಥಳೀಯರ ಸಮಸ್ಯೆ ಆಲಿಸಿದ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.
4 ವರ್ಷ ಹಿಂದೆ ರಸ್ತೆ ಅಗಲೀಕರಣದೊಂದಿಗೆ ಅಭಿವೃಧ್ಧಿ ಹೆಸರಿನಲ್ಲಿ ರಸ್ತೆ ಅಕ್ಕಪಕ್ಕದ ಅಂಗಡಿ-ಮನೆಗಳನ್ನು ತರೆವುಗೊಳಿಸಿ ಸರ್ಕಾರದಿಂದ ಅನುದಾನ ಬಿಡುಗಡೆಯಾಗದೆ ರಸ್ತೆ ಅಭಿವೃದ್ಧಿ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಇದೀಗ ಪಟ್ಟಣ ವ್ಯಾಪ್ತಿಯ 1 ಕಿ.ಮೀ. ರಸ್ತೆ ಅಭಿವೃದ್ಧಿಗಾಗಿ 1.14 ಕೋಟಿ ಬಿಡುಗಡೆಯಾಗಿದೆ. ಕಾಮಗಾರಿಗೆ ಚಾಲನೆ ದೊರೆತ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರು ನೂರಾರು ಕಾರ್ಯಕರ್ತರೊಂದಿಗೆ ರಸ್ತೆ ಕಾಮಗಾರಿಯ ಗುಣಮಟ್ಟ ಪರಿಶೀಲಿನೆ ನಡೆಸಿದರು.
ಈ ಸಂದರ್ಭ ಜಿ.ಪಂ. ಸದಸ್ಯ ಪ್ರಸನ್ನಕುಮಾರ್, ತಾ.ಪಂ. ಸದಸ್ಯ ಜಿ.ಎಲ್. ಹನುಮಂತರಾಯಪ್ಪ, ರವಿಕುಮಾರ್, ಪ.ಪಂ. ಸದಸ್ಯ ಕೆ.ವಿ. ಮಂಜುನಾಥ್, ಮುಖಂಡರಾದ ಮಯೂರ ಗೋವಿಂದರಾಜು, ಓಬಳರಾಜು, ಅಶ್ವತ್ಥನಾರಾಯಣ್ ಮತ್ತಿತರರು ಇದ್ದರು.