ವಿಷ ಆಹಾರ ಸೇವನೆ: 76 ವಿದ್ಯಾರ್ಥಿಗಳು ಅಸ್ವಸ್ಥ

Updated on: 

ಪಾವಗಡ: ವಿಷಪೂರಿತ ಆಹಾರ ಸೇವಿಸಿದ ಪರಿಣಾಮ, ಮೂವರು ಉಪಾಧ್ಯಾಯರು ಸೇರಿದಂತೆ ಸುಮಾರು 76 ವಿದ್ಯಾರ್ಥಿಗಳು ಹೊಟ್ಟೆನೋವು ಹಾಗೂ ಭೇದಿಯಿಂದ ಆಸ್ವಸ್ಥರಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ಪಟ್ಟಣದ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ನಡೆದಿದೆ.
ತಾಲೂಕು ಸಮಾಜ ಕಲ್ಯಾಣ ಆಡಳಿತಾಧಿಕಾರಿ ಹಾಗೂ ಪ್ರಾಂಶುಪಾಲ ರಂಗೇಗೌಡ ಹಾಗೂ ನಿಲಯ ಪಾಲಕ ಉಗ್ರಪ್ಪನ ಬೇಜವಬ್ದಾರಿ ತನದಿಂದಾಗಿ, ಹಾಸ್ಟಲ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ತಾಲೂಕು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಸೇರಿದ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆ ಹಾಸ್ಟಲ್‌ನಲ್ಲಿ 6 ರಿಂದ 9 ರವರೆಗೆ ಸುಮಾರು 203 ಮಂದಿ ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕಳೆದ 22 ರಂದು ಮಂಗಳವಾರ ರಾತ್ರಿ ಹಾಸ್ಟಲ್‌ನಲ್ಲಿ ಮಾಡಿದ ಅಡುಗೆ ವಿಷಪೂರಿತವಾಗಿದ್ದು, ಮುದ್ದೆ ಹಾಗೂ ಅನ್ನ ಸೇವಿಸಿದ ಸ್ವಲ್ಪ ಸಮಯದ ನಂತರ ಆನೇಕ ಮಂದಿ ವಿದ್ಯಾರ್ಥಿಗಳಲ್ಲಿ ಹೊಟ್ಟೆನೋವು ಹಾಗೂ ಭೇದಿ ಕಾಣಿಸಿಕೊಂಡಿದೆ.
ಘಟನೆಯಿಂದ ತಳಮಳಗೊಂಡ ಸಿಬ್ಬಂದಿ ಕೂಡಲೇ, ಪ್ರಾಂಶುಪಾಲ ರಂಗೇಗೌಡ ಹಾಗೂ ನಿಲಯ ಪಾಲಕ ಉಗ್ರಪ್ಪನಿಗೆ ಕರೆ ಮಾಡಿರುವುದಾಗಿ ತಿಳಿದಿದ್ದು, ಕರೆಗೆ ಅಧಿಕಾರಿಗಳು ಸಿಗದ ಕಾರಣ ಅಲ್ಲಿಯೆ ಇದ್ದ ಸ್ಟಾಪ್‌ನರ್ಸ್ ಚಂದ್ರಮ್ಮ ಎಂಬುವರು ಬಳಲುತ್ತಿದ್ದ ವಿದ್ಯಾರ್ಥಿಗಳಿಗೆ ಮಾತ್ರೆ ಕೊಟ್ಟಿದ್ದಾರೆ. ಮಾತ್ರೆ ಸೇವಿಸಿದರೂ ಸುಧಾರಣೆ ಆಗದೆ, ಸುಮಾರು 76 ಮಂದಿ ವಿದ್ಯಾರ್ಥಿಗಳಲ್ಲಿ ರೋಗ ಕಾಣಿಸಿಕೊಂಡು ರಾತ್ರಿಯಿಡಿ  ಹೊಟ್ಟೆನೋವು ಹಾಗೂ ಭೇದಿಯಿಂದ ಬಳಲಿದ್ದಾರೆ.
ಬುಧವಾರ ಬೆಳಿಗ್ಗೆ ವಿಷಯ ತಿಳಿಯುತ್ತಿದ್ದಂತೆ ಕೂಡಲೇ ವಸತಿ ಶಾಲೆ ಹಾಸ್ಟೆಲ್‌ಗೆ ಭೇಟಿ ನೀಡಿದ ಪ್ರಾಂಶುಪಾಲ ರಂಗೇಗೌಡ ಹಾಗೂ ನಿಲಯ ಪಾಲಕ ಉಗ್ರಪ್ಪ ತೀವ್ರ ಆಸ್ವಸ್ಥರಾದ ಚಂದನ,ಅಂಬಿಕಾ, ವಿದ್ಯಾಬಾಯಿ, ಮಹಾಲಕ್ಷ್ಮಿ, ಸುಮಂಗಲ ಮೌನಿಕ ಅಂಬಿಕಾ ಭಾಗ್ಯಲಕ್ಷ್ಮೀ ಶೈಲಜಾ ಸಾವಣಿ ಸುಜನ ಸೇರಿದಂತೆ ಆಸ್ವಸ್ತರಾದ ಸುಮಾರು 76 ಮಂದಿ ವಿದ್ಯಾರ್ಥಿಗಳನ್ನು
ತುರ್ತು ವಾಹನವೊಂದರಲ್ಲಿ ಕರೆತಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ವಸ್ತರಾದ ವಿದ್ಯಾರ್ಥಿಗಳನ್ನು ಪರೀಕ್ಷಿಸಿದ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಮಹೇಶ್ ಕೂಡಲೇ ಅಗತ್ಯವಾದ ಒಆರ್‌ಎಸ್ ಗ್ಲೊಕೊಸ್ ಚಿಕಿತ್ಸೆ ನೀಡಿ ಬಳಲುತ್ತಿದ್ದ ವಿದ್ಯಾರ್ಥಿಗಳ ಹೊಟ್ಟೆ ನೋವು ಹಾಗೂ ಭೇದಿ ಸುಧಾರಿಸಿದ್ದಾರೆ. ಈ ರೋಗ ಸಾಮಾನ್ಯವಾಗಿ ಹಾಸ್ಟೆಲ್‌ನಲ್ಲಿ ಆನೈರ್ಮಲ್ಯ, ಕಲುಷಿತ ನೀರು ಸೇವನೆ ಹಾಗೂ ವಿಷಪೂರಿತ ಆಹಾರ ಸೇವನೆಯಿಂದ ಹರಡಿರುವುದಾಗಿ ವೈದ್ಯರು ಶಂಕೆ ವ್ಯಕ್ತಪಡಿಸಿ, ರೋಗದ ಬಗ್ಗೆ ಪರೀಕ್ಷಿಸಲು ಲ್ಯಾಬ್‌ಗೆ ಕಳುಹಿಸಿದ್ದಾರೆ.
ಹಾಸ್ಟಲ್‌ನಲ್ಲಿ ಅಡಿಗೆ ಮಾಡುವವರು ಆಸುಭ್ರವಾಗಿರುವುದಲ್ಲದೆ ಹಾಸ್ಟಲ್ ಆಸ್ವಚ್ಛತೆ, ಕಲುಷಿತ ನೀರನ್ನು ಅಡುಗೆಗೆ ಬಳಸಲಾಗುತ್ತಿದೆ ಎಂದು ಆಸ್ಪತ್ರೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದ ಹಿರಿಯ ಆರೋಗ್ಯ ಸಹಾಯಕಾಧಿಕಾರಿ ಡಾ.ಅಂಜನೇಯ ರೋಗ ಹರಡಿ 3 ದಿನ ಕಳೆದರೂ ಉಸ್ತುವಾರಿ ವಹಿಸಿಕೊಂಡ ತಾಲೂಕು ಸಮಾಜ ಕಲ್ಯಾಣಾಧಿಕಾರಿ ರಂಗೇಗೌಡ ಹಾಗೂ ಹಾಸ್ಟೆಲ್ ನಿಲಯ ಪಾಲಕ ಉಗ್ರಪ್ಪ ಬೇಜಾವಾಬ್ದಾರಿಯಿಂದಲೇ ವಿದ್ಯಾರ್ಥಿಗಳಲ್ಲಿ ಈ ರೋಗ ಹರಡಲು ಕಾರಣ ಎಂದು ಆರೋಪಿಸಿದರು.
ತಾಪಂ ಅಧ್ಯಕ್ಷೆ ರಾಧಾ ರಾಜಗೋಪಾಲ್ ತಾಲೂಕು ದಂಡೋರ ನಾಗೇಶ್, ಕಾರ್ಯದರ್ಶಿ ಕಡಮಲಕುಂಟೆ ಹನುಮಂತರಾಯ ಮುಂತಾದವರು ಭೇಟಿ ನೀಡಿ ಅಡುಗೆ ಅಕ್ಕಿ ಸೇರಿದಂತೆ ಕಳಪೆ ತರಕಾರಿ ಬಳಸಲಾಗುತ್ತಿದೆ ಎಂದು ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com