ತುಮಕೂರು: ಇಂದಿನ ಯುವ ವಿದ್ಯಾರ್ಥಿಗಳು ಹೃದಯ ವೈಶಾಲ್ಯ ಬೆಳೆಸಿಕೊಳ್ಳಬೇಕು ಎದು ಉಪನ್ಯಾಸಕ ರವೀಶ್ ಸಲಹೆ ನೀಡಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.
ಸ್ವಾಮಿ ವಿವೇಕಾನಂದರ ಜೀವನ ಘಟನೆಗಳು ಮತ್ತು ಸಂದೇಶಗಳನ್ನು ಕುರಿತು ಮಾತನಾಡಿದ ಅವರು, ಇಂದಿನ ಯುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಿವೇಕಾನಂದರನ್ನು ಸರಿಯಾಗಿ ಅರ್ಥ ಮಾಡಿಕೊಂಡು ಆಚಾರ, ವಿಚಾರ, ವಿದ್ವತ್ ಜತೆಗೆ ಹೃದಯ ವೈಶಾಲ್ಯತೆ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಡಿದರು.
ವಿವೇಕಾನಂದರ ವಾಣಿಯಂತೆ ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ ಎಂಬುದನ್ನು ಮನಗಾಣಬೇಕು ಎಂದ ಅವರು ಯುವಕರು ಬಲಶಾಲಿಗಳಾಗಬೇಕೆಂದು ಕರೆ ನೀಡಿದರು.
ಆರೋಗ್ಯಕರ ಸಮಾಜ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಕರು ಮುಂದಾಗಬೇಕೆಂದರು. ವಿವೇಕಾನಂದ ಜಯಂತೋತ್ಸವ ಅಂಗವಾಗಿ ನಡೆದ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಚಿಕ್ಕಹನುಮಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಕೆ.ಎಸ್. ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಎಂ.ಎನ್.ಎನ್. ಪ್ರಸಾದ್ ನಿರೂಪಿಸಿ ವಂದಿಸಿದರು. ಬೋಧಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.