ಶಿರಾ: ತಾಲೂಕಿನ ಪಟ್ಟನಾಯಕನಹಳ್ಳಿ ವ್ಯಾಪ್ತಿಯ ಮೇಲ್ಕುಂಟೆ ಗ್ರಾಮದಲ್ಲಿ ಕಾರೊಂದು ವ್ಯಕ್ತಿಯೊಬ್ಬರಿಗೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಮೇಲ್ಕುಂಟೆ ಗ್ರಾಮದ ಕೊತ್ತುರು ಮಲ್ಲಪ್ಪ (65) ಎಂಬುವರೆ ಮೃತ ದುರ್ದೈವಿಯಾಗಿದ್ದು, ಮೃತರು ರಸ್ತೆ ಬದಿಯಲ್ಲಿ ಪಾಯವನ್ನು ತೆಗೆಯುವಾಗ ಅಪರಿಚಿತ ಕಾರೊಂದು ರಭಸವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ನಂತರ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾಧಿಕಾರಿ ಎಸ್.ಕೆ. ನದಾಫ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.