'ಸವಾಲುಗಳ ನಡುವೆಯೂ ಸಂಘ ಅತ್ಯಂತ ಯಶಸ್ವಿ'

Updated on: 

ತುಮಕೂರು: ಹಲವು ಸವಾಲುಗಳ ನಡುವೆಯೂ ಸಂಘವನ್ನು ಅತ್ಯಂತ ಯಶಸ್ವಿ ಕಾರ್ಯಚಟುವಟಿಕೆಗಳಿಂದ ಮುನ್ನಡೆಸಿಕೊಂಡು ಬಂದ ತೃಪ್ತಿ ನನಗಿದೆ ಎಂದು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಎಂ.ಸಿ.  ಲಲಿತಾ ನುಡಿದರು.
ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ ಅಂಗವಾಗಿ ಇತ್ತೀಚೆಗೆ ನಗರದ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಲೇಖಕಿಯರ ಸಂಘದ ವಾರ್ಷಿಕ ಸಭೆ ಹಾಗೂ ಜಯದೇವಿ ತಾಯಿ ಲಿಗಾಡೆ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ 6 ವರ್ಷಗಳ ಅವಧಿಗೆ ನನ್ನನ್ನು ಅಧ್ಯಕ್ಷರನ್ನಾಗಿ ಆರಿಸಿಕೊಂಡು ಬಂದ ಸಂಘದ ಅನೇಕ ಪದಾಧಿಕಾರಿಗಳ ಬೆಂಬಲದಿಂದಾಗಿ ಸಂಘವನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಯಿತು. ರಾಜ್ಯ ಮಟ್ಟದ ಪತ್ರಿಕಾ ಶಿಬಿರ, ರಾಜ್ಯ ಮಟ್ಟದ ಕಥಾ ಕಮ್ಮಟ ಹಾಗೂ ಸಂಘದ ಬೆಳ್ಳಿ ಹಬ್ಬವನ್ನು ತುಮಕೂರಿನಲ್ಲಿ ಆಚರಿಸುವುದರ ಮೂಲಕ ಸಂಘದ ಚಟುವಟಿಕೆಗಳನ್ನು ವಿಸ್ತಾರಗೊಳಿಸಲಾಯಿತು ಎಂದರು.
ನನ್ನ ಚಟುವಟಿಕೆಗಳಿಗೆ ಬಹಳಷ್ಟು ಲೇಖಕಿಯರು ಸ್ಫೂರ್ತಿದಾಯರಾಗಿದ್ದು ಇವರೆಲ್ಲರಿಗೂ ನಾನು ಚಿರಋಣಿ ಎಂದರು. ಇಷ್ಟೆಲ್ಲಾ ಮಾಡಿಕೊಂಡು ಬಂದರೂ ಬೆರಳೆಣಿಕೆಯ ಕೆಲವರ ಕುಕೃತ್ಯದಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದ್ದು ಇನ್ನು ಮುಂದೆ ಬರುವವರು ಇಂತಹ ಸವಾಲುಗಳನ್ನು ಸ್ವೀಕರಿಸಿಯೇ ಸಂಘವನ್ನು ಮುನ್ನಡೆಸಬೇಕು ಎಂದರು.
ಧೀಮಂತ ಮಹಿಳೆ : ಜಯದೇವಿ ತಾಯಿ ಲಿಗಾಡೆ ಕುರಿತು ಉಪನ್ಯಾಸ ನೀಡಿದ ಕದಳಿ ವೇದಿಕೆ ಅಧ್ಯಕ್ಷೆ ಪ್ರೇಮ ಮಲ್ಲಣ್ಣ ಅವರು ಕರ್ನಾಟಕ ಏಕೀಕರಣದಲ್ಲಿ ಹೋರಾಟ ಮಾಡಿದ ಧೀಮಂತ ಮಹಿಳೆ ಜಯದೇವಿತಾಯಿ ಲಿಗಾಡೆ ಎಂದು ಬಣ್ಣಿಸಿದರು.
ಎಂ.ಸಿ. ಲಲಿತ ಅವರನ್ನು ಅಭಿನಂದಿಸಿ ಮಾತನಾಡಿದ ಲೇಖಕಿ ವಿಜಯಮೋಹನ್ ಅವರು ತಮ್ಮ ಅವಧಿಯಲ್ಲಿ ಬಹುತೇಕ ಎಲ್ಲಾ ಕಾರ್ಯಕ್ರಮಗಳಿಗೆ ತನ್ನ ಸ್ವಂತ ಖರ್ಚಿನಿಂದಲೇ ನಿಭಾಯಿಸುತ್ತಾ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಕಾರ್ಯ ಮಾಡಿದ್ದಾರೆಂದು ತಿಳಿಸಿದರು.
ಪರಿಮಳ, ಪಾವಗಡ ಸಣ್ಣರಂಗಮ್ಮ, ಹುಳಿಯಾರು ತಮ್ಮಯ್ಯ, ಮಲ್ಲಿಕಾ ಬಸವರಾಜು, ಸುಮಪ್ರಸನ್ನ, ನಾಗರತ್ನ ಚಂದ್ರಪ್ಪ ಮೊದಲಾದವರು ಮಾತನಾಡಿದರು. ಬಾ.ಹ. ರಮಾಕುಮಾರಿ, ಅನ್ನಪೂರ್ಣ ವೆಂಕಟನಂಜಪ್ಪ, ಬಿ.ಸಿ. ಶೈಲಾ ನಾಗರಾಜ್ ಸೇರಿ ಹಲವಾರು ಮಂದಿ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರನ್ನಾಗಿ ಸುಗುಣಾದೇವಿ ಅವರನ್ನು ಆಯ್ಕೆ ಮಾಡಲಾಯಿತು. ಪಂಕಜ ರಾಜಶೇಖರ್ ಪ್ರಾರ್ಥಿಸಿದರು. ಸಿ.ಎಲ್. ಸುನಂದಮ್ಮ ಸ್ವಾಗತಿಸಿದರು. ಸಿ.ಎ. ಇಂದಿರಾ ವರದಿ ಓದಿದರು. ಎಚ್.ವೈ. ಲಲಿತ ಲೆಕ್ಕಪತ್ರ ಮಂಡಿಸಿದರು. ಸುಗುಣಾದೇವಿ ನಿರೂಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com