ಕಲ್ಪತರು ನಾಡಿನಲ್ಲಿ ಬಿಜೆಪಿ, ಬಿಎಸ್‌ವೈ ಭದ್ರಪಡಿಸಿದ್ದು ನಾನೇ: ಬಿ.ನಂಜಾಮರಿ

Updated on: 

ಕ.ಪ್ರ. ವಾರ್ತೆ ್ಣ  ತಿಪಟೂರು ್ಣ ಮಾ.29
ಈ ಹಿಂದೆ ಬಿಎಸ್‌ವೈ ಬಿಜೆಪಿಯಲ್ಲಿದ್ದಾಗಲೇ ಅವರ ರಾಜಕೀಯ ಶಕ್ತಿಗೆ ಕಲ್ಪತರು ನಾಡಿನಲ್ಲಿ ಮೊದಲ ಬಾರಿಗೆ ಭದ್ರ ಬುನಾದಿ ಹಾಕಿದ್ದು ಹಾಗೂ ಜಿಲ್ಲೆಯಲ್ಲಿ ಬಿಜೆಪಿ ಬಾವುಟ ಹಾರಿಸಿದ್ದು ನಾನೇ ಎಂದು ಮಾಜಿ ಶಾಸಕ ಬಿ.ನಂಜಾಮರಿ ತಿಳಿಸಿದರು.
ತಾಲೂಕಿನ ನೊಣವಿನಕೆರೆಯಲ್ಲಿ ನಡೆದ ಕೆಜೆಪಿ ಕಾರ್ಯಕರ್ತರ ಬೂತ್‌ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ತಿಪಟೂರಿನಿಂದ ಬಿಜೆಪಿ ಪಕ್ಷದ ಪ್ರಥಮ ಶಾಸಕನಾಗಿ ಆಯ್ಕೆಯಾಗಿ ತಾಲೂಕಿನಲ್ಲಿ ಬಿಜೆಪಿ ಮತ ಬ್ಯಾಂಕ್ ಭದ್ರಪಡಿಸಿದ್ದೆ. ಅನಿವಾರ್ಯ ಕಾರಣಗಳಿಂದ ಪಕ್ಷವನ್ನು ಅಂದು ತೊರೆದು ಜೆಡಿಎಸ್ ಬೆಂಬಲಿಸಿದೆ ಎಂದು ಅಭಿಪ್ರಾಯಪಟ್ಟರು.
ಅಭ್ಯರ್ಥಿ ಲೋಕೇಶ್ವರ ಮಾತನಾಡಿ, ಕೆಜೆಪಿ ಕಾರ್ಯಕರ್ತರು  ಪಕ್ಷದ ಚಿಹ್ನೆಯನ್ನು ಮತದಾರರಿಗೆ ಮನವರಿಕೆ ಮಾಡುವುದು ಮಹತ್ವವಾಗಿದೆ. ಹತ್ತು ಹಲವಾರು ಪ್ರಗತಿ ಪರ ಕಾರ್ಯಕ್ರಮಗಳನ್ನು ಮನೆ ಮನೆಗೆ ತೆರಳಿ ನೆನಪಿಸುವುದರ ಮೂಲಕ ಕೆಜೆಪಿ ಗೆಲವಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ತಾಲೂಕು ಕೆಜೆಪಿ ಅಧ್ಯಕ್ಷ ರಘುಪತಿ, ಮುಖಂಡರಾದ ನಂದೀಶ್, ಭೈರಪ್ಪ, ಚಂದ್ರಣ್ಣ, ದಿನೇಶ್ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ  ಬಳ್ಳಾರಿ ಶಿವಣ್ಣ, ಕುಮಾರ್, ಅಣ್ಣಪ್ಪಶೆಟ್ಟಿ ಸೇರಿದಂತೆ ವಿವಿಧ ಪಕ್ಷದ ಮುಖಂಡರು ಕೆಜೆಪಿ ಸೇರ್ಪಡೆಯಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com