ಕ.ಪ್ರ. ವಾರ್ತೆ ಪಾಂಡವಪುರ ಮಾ. 29
ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಜಾತ್ಯತೀತ ಜನತಾದಳದವರಿಂದ ಹೆಚ್ಚುತ್ತಿರುವ ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಚುನಾವಣಾಧಿಕಾರಿಗಳ ಗಮನ ಸೆಳೆಯಲು ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಕೋ.ಪು. ಗುಣಶೇಖರ್ ನೇತೃತ್ವದಲ್ಲಿ ಶುಕ್ರವಾರ ಪತ್ರ ಚಳವಳಿ ನಡೆಯಿತು.
ಪಟ್ಟಣದ ಮುಖ್ಯ ಅಂಚೆ ಕಚೇರಿ ಮುಂದೆ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಮೇಲುಕೋಟೆ ಕ್ಷೇತ್ರದಲ್ಲಿ ಮತದಾರರಿಗೆ ಹಣ ಹೆಂಡ ಹಂಚಲು ಸಿದ್ಧತೆ ನಡೆಸಿ ಸಿಕ್ಕಿಬಿದ್ದಿರುವ ಜಾತ್ಯತೀತ ಜನತಾದಳ ಕಾರ್ಯಕರ್ತರ ಕೃತ್ಯವನ್ನು ಖಂಡಿಸಿ ಇದಕ್ಕೆಲ್ಲಾ ಕುಮ್ಮಕ್ಕು ನೀಡುತ್ತಿರುವ ಶಾಸಕ ಸಿ.ಎಸ್. ಪುಟ್ಟರಾಜು ಅವರನ್ನು ಕಣದಿಂದ ಅನರ್ಹಗೊಳಿಸಿ ಮುಕ್ತ ಹಾಗೂ ನ್ಯಾಯ ಸಮ್ಮತ ಮತದಾನಕ್ಕೆ ಅವಕಾಶ ಮಾಡಿಕೊಡಬೇಡವೆಂದು ರಾಜ್ಯ ಚುನಾವಣಾಧಿಕಾರಿಗಳನ್ನು ವಿನೂತನ ಪತ್ರ ಚಳವಳಿ ಮೂಲಕ ಎಚ್ಚರಿಸಿದರು.
ಚುನಾವಣೆ ಹತ್ತಿರವಾಗುತ್ತಿದ್ದಂತೆ ಕ್ಷೇತ್ರದಾದ್ಯಂತ ಮತದಾರರಿಗೆ ಹಂಚಲು ಹಣ ಹೆಂಡದ ಅಕ್ರಮ ದಾಸ್ತಾನು ಮಾಡಲಾಗಿತು.್ತ ಕೂಡಲೇ ಚುನಾವಣಾಧಿಕಾರಿಗಳು ಇದನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದರು.
ಕಣ್ಗಾವಲು ಸಮಿತಿ ರಚನೆ: ಕ್ಷೇತ್ರದಾದ್ಯಂತ ಮತದಾರರಿಗೆ ಇನ್ನಿಲ್ಲದ ಆಮಿಷಗಳನ್ನು ಒಡ್ಡುತ್ತಿರುವ ಇವರ ಮೇಲೆ ನಿಗಾ ಇಡಲು ಪ್ರತಿ ಬೂತ್ ಹಂತದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಕಣ್ಗಾವಲು ಸಮಿತಿ ರಚಿಸಲು ಸಿದ್ಧತೆ ನಡೆಸಲಾಗಿದ್ದು ಜೆಡಿಎಸ್ನ ಎಲ್ಲಾ ಚುನಾವಣಾ ಅಕ್ರಮಕ್ಕೆ ತಡೆ ಒಡ್ಡಲಾಗುತ್ತದೆ ಎಂದು ಗುಣಶೇಖರೆ ಹೇಳಿದರು.