ಪಾವಗಡ: ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜ್ ಪ್ರೌಡಶಾಲಾ ವಿಭಾಗದ ಉಪ ಪ್ರಾಂಶುಪಾಲ ಪಿ. ಗೋವಿಂದಪ್ಪ ಜು.31ರಂದು ಸೇವೆಯಿಂದ ನಿವೃತ್ತರಾಗಿದ್ದು, ಶಾಲೆಯ ಹಿರಿಯ ಶಿಕ್ಷಕ ರಾಮಕೃಷ್ಣಪ್ಪ ಪ್ರಭಾರ ಉಪ ಪ್ರಾಂಶುಪಾಲರಾಗಿ ಕರ್ತವ್ಯ ವಹಿಸಿಕೊಂಡಿದ್ದಾರೆ. ಜು.31ರ ಸಂಜೆ ಸೇವೆಯಿಂದ ನಿವೃತ್ತರಾಗಿ ಶಾಲೆಯಿಂದ ಮನೆಗೆ ತೆರಳುವ ಸಂದರ್ಭದಲ್ಲಿ ಸೌಜನ್ಯಕ್ಕಾದರೂ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ಗೌರವ ತೋರದೆ ಅಪಮಾನ ಮಾಡಿದ್ದಾರೆಂದು ನಿವೃತ್ತ ಪ್ರಾಂಶುಪಾಲ ಗೋವಿಂದಪ್ಪ ಆರೋಪಿಸಿದ್ದಾರೆ.