ತುಮಕೂರು: ತುಮಕೂರಿನ ಎಸ್ಎಸ್ ಪುರಂನಲ್ಲಿರುವ ರಾಘವೇಂದ್ರ ಸಂಗೀತ ಸಭಾ ಆಶ್ರಯದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿ ವೃಂದಕ್ಕೆ ಲಾವಣ್ಯರ ಸ್ಮರಣಾರ್ಥ ಸಂಗೀತ ಹಾಗೂ ಸಂಗೀತ ವಾದ್ಯಗಳ ಸ್ಪರ್ಧೆಯನ್ನು ಆ. 3 ರಂದು ಬೆಳಗ್ಗೆ 9 ಗಂಟೆಗೆ ಹೊರಪೇಟೆಯಲ್ಲಿರುವ ಚೇತನ ವಿದ್ಯಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಮಾಹಿತಿಗಾಗಿ ವತ್ಸಲ ರಂಗರಾಜ್, 9964328455, ಲಲಿತಾ ಚಲಂ, 9901280050, ಲೋಲಾಕ್ಷಿ ಶ್ರೀನಿವಾಸ್, 9886913047, ಸುಧಾಪ್ರಸಾದ್, 9886573586 ಸಂಪರ್ಕಿಸುವಂತೆ ಕೋರಲಾಗಿದೆ.