ಕೊರಟಗೆರೆ: ಜ್ಞಾನಿಗಳು, ಸಾಧಕರು ಜಗತ್ತಿಗೆ ಬಂದು ಹೋಗುತ್ತಾರೆ ಯಾರೂ ಈ ಭೂಮಿಯ ಮೇಲೆ ಇಲ್ಲದಿದ್ದರೂ ಅವರು ಮಾಡಿರುವ ಕೆಲಸಗಳು ಶಾಶ್ವತವಾಗಿ ಉಳಿಯಲಿದ್ದು ಈ ಹಿನ್ನೆಲೆಯಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡಬೇಕು ಎಂದು ಹನುಮಂತಪುರದ ನವಗ್ರಹ ಲಕ್ಷ್ಮೀಶ್ವರಿಮಠದ ನಾಗೇಂದ್ರಸ್ವಾಮೀಜಿ ತಿಳಿಸಿದರು. ಮಠದ ವತಿಯಿಂದ ಸಾಧಕಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿ ಪ್ರಾಚೀನ ಕಾವ್ಯಗಳ ಪ್ರವಚನಕಾರ ಮುರಳಿಕೃಷ್ಣ ಮಾತನಾಡಿ, ಪ್ರಕೃತಿ ತನ್ನಲ್ಲಿರುವ ರಹಸ್ಯವನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ ಈ ದಿಸೆಯಲ್ಲಿ ಪೂರ್ಣ ಪ್ರಮಾಣದ ಶ್ರಮದೊಂದಿಗೆ ಪ್ರಯತ್ನಪಟ್ಟರೆ ಪ್ರಕೃತಿಯ ಗುಟ್ಟನ್ನು ತಿಳಿದುಕೊಳ್ಳಬಹುದೆಂದು ತುಮಕೂರಿನ ಕಲ್ಪತರು ಸಾಂಸ್ಕೃತಿಕ ವೇದಿಕೆಯ ಎಚ್. ಮರಿದೇವರು ಹೇಳಿದರು. ಬದುಕನ್ನು ಸಾರ್ಥಕ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಮನುಷ್ಯ ಜನ್ಮ ಸಿಕ್ಕಿದ್ದು ಇದನ್ನು ಸಮರ್ಪಕವಾಗಿ ಬಳಸಿಕೊಂಡು ಉನ್ನತಿಗೆ ಹೋಗಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯೆ ಚೌಡಮ್ಮ, ಉದಯ್ಕುಮಾರ್, ಲಕ್ಕಪ್ಪ, ಲಿಂಗಣ್ಣ, ರೇಣುಕಾ ಸೇರಿ ಅನೇಕರಿದ್ದರು.