ಹುಳಿಯಾರು: ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ ತಾಲೂಕಿನಾದ್ಯಂತ ಶುಕ್ರವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕೆಲವರು ಮನೆಗಳಲ್ಲಿ ಹಾಗೂ ರಂಗನಾಥಸ್ವಾಮಿ ದೇವಾಲಯದ ಬಳಿಯ ಅಶ್ವಥಕಟ್ಟೆ, ಹುಳಿಯಾರಮ್ಮ ದೇವಾಲಯದ ಮೂಲಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ನಾಗರಕಲ್ಲಿಗೆ ಹಾಗೂ ಕೆರೆ ಏರಿ ಮೇಲಿರುವ ಹುತ್ತಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಗ್ರಾಮದೇವತೆ ದುರ್ಗಮ್ಮ ದೇವಸ್ಥಾನದಲ್ಲಿ ಈ ನಿಮಿತ್ತ ದೇವಿಯ ಸುತ್ತ ಹುತ್ತವನ್ನೇ ನಿರ್ಮಿಸಿ ನಾಗದೇವತೆ ಅಲಂಕಾರ ಮಾಡಲಾಗಿತ್ತು.