ಕೊರಟಗೆರೆ: ರಾಜ್ಯ ಸರ್ಕಾರ ಮಾಡಿರುವ ಕ್ಷೀರಭಾಗ್ಯ ಯೋಜನೆಯಿಂದ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುವುದಲ್ಲದೇ ರಾಜ್ಯದ ಹಾಲು ಒಕ್ಕೂಟಗಳೂ ಆರ್ಥಿಕವಾಗಿ ಸದೃಢಗೊಂಡಿವೆ ಎಂದು ಕೆಎಂಎಫ್ ನಿರ್ದೇಶಕ ವಿಜಯ್ಶಂಕರ್ ತಿಳಿಸಿದರು.
ತಾಲೂಕಿನ ಮಲ್ಲೇಕಾವು ಸರ್ಕಾರಿ ಪ್ರೌಢಶಾಲೆಯಲ್ಲಿ ರಾಜ್ಯ ಸರ್ಕಾರದ ಕ್ಷೀರಭಾಗ್ಯ ಯೋಜನೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೊರಟಗೆರೆ ಹಾಲು ಒಕ್ಕೂಟದ ಘಟಕದ ವತಿಯಿಂದ ಸವಿನೆನಪು ವಿಶೇಷ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಾಲು ವಿತರಿಸಿ ಮಾತನಾಡಿದರು. ಎಲ್. ಕಾಮಯ್ಯ, ಹನುಮಂತರಾಯಪ್ಪ, ಮೇಲ್ವಚಾರಕರಾದ ಪುಷ್ಪಲತಾ, ಅರುಣ್, ಮುಖ್ಯ ಶಿಕ್ಷಕ ಎಂ.ಡಿ ರಾಮಚಂದ್ರಯ್ಯ ಇತರರು ಇದ್ದರು.