ಗುಬ್ಬಿ: ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ಮಹತ್ವದ ಸ್ಥಾನವಿದ್ದು, ಪ್ರತಿಯೊಬ್ಬರೂ ಧಾರ್ಮಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವತ್ತ ಪ್ರಯತ್ನ ಮಾಡಬೇಕೆಂದು ದಾವಣಗೆರೆ ಈಶ್ವರೀಯ ವಿಶ್ವವಿದ್ಯಾಲಯದ ಲೀಲಕ್ಕರವರು ಹೇಳಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ರಕ್ಷಾಬಂಧನ ಸಮಾರಂಭದಲ್ಲಿ ಮಾತನಾಡಿ, ಪ್ರತಿಯೊಂದು ಧಾರ್ಮಿಕ ಆಚರಣೆಗೂ ಮಹತ್ವದ ಪರಿಕಲ್ಪನೆಗಳಿವೆ. ನಮ್ಮ ಸಾಂಸ್ಕತಿಕ ಮೌಲ್ಯಗಳನ್ನು ಆಚರಣೆ ಮೂಲಕ ರೂಡಿಸಿಕೊಂಡಾಗ ಸುಸಂಸ್ಕತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.
ಆಧುನೀಕತೆ ಬೆಳೆದಂತೆ ಸನಾತನ ಮೌಲ್ಯಗಳು ಕುಸಿಯುತ್ತಿದ್ದು ಮನುಷ್ಯನ ಜೀವನವೂ ಯಾಂತ್ರಿಕರಣಗೊಳ್ಳುತ್ತಿದೆ. ಇಂತಹ ಸಂಸರ್ಭದಲ್ಲಿ ಶಾಂತಿ ನೆಮ್ಮದಿಗಾಗಿ ಪರಿತಪಿಸುವ ಸ್ಥಿತಿ ಉಂಟಾಗಿದ್ದು, ಈಶ್ವರೀಯ ವಿಶ್ವವಿದ್ಯಾಲಯ ಧ್ಯಾನ ಮತ್ತು ಆದ್ಯಾತ್ಮಿಕ ಚಿಂತನೆಗಳ ಮೂಲಕ ಮನಸ್ಸಿನಲ್ಲಿ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡುತ್ತಿರುವುದಾಗಿ ತಿಳಿಸಿದರು.
ರಕ್ಷಾ ಬಂದನದಂತಹ ಆಚರಣೆಗಳು ಮಾನವನ ಬದುಕಿನಲ್ಲಿ ಮಾನವೀಯ ಮೌಲ್ಯಗಳನ್ನು ಪ್ರತಿಬಿಂಭಿಸಲಿವೆ. ಆದ್ದರಿಂದ ಪ್ರತಿವರ್ಷ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲ ಜನಸಾಮಾನ್ಯರಿಗೆ ಧಾರ್ಮಿಕ ಮೌಲ್ಯಗಳ ಜೊತೆಗೆ ಭಾವನಾತ್ಮಕ ಸಂಬಂಧಗಳನ್ನು ಕಲ್ಪಿಸಲು ವಿನೂತನ ರೀತಿಯಲ್ಲಿ ರಕ್ಷಾ ಬಂದನ ಕಾರ್ಯಕ್ರಮ ನಡೆಸುತ್ತಿದೆ ಎಂದರು.
ಲಯನ್ಸ್ ಸಂಸ್ಥೆಯ ಜಿ.ಆರ್. ಶಿವಕುಮಾರ್ ಮಾತನಾಡಿ, ಪ್ರಜಾಪಿತ ಈಶ್ವರೀಯ ವಿಶ್ವ ವಿದ್ಯಾಲಯ ಜನಸಾಮಾನ್ಯರಿಗೆ ಧಾರ್ಮಿಕ ಮೌಲ್ಯಗಳನ್ನು ಕಲಿಸುವ ಜೊತೆಗೆ ಮನಸ್ಸಿನಲ್ಲಿ ಶಾಂತಿ ನೆಮ್ಮದಿ ನೀಡುವ ಮಹತ್ವದ ಸಾಧನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಡಾ. ಕೃಷ್ಣಮೂರ್ತಿ, ಪಿ.ಸಿ. ಬಾಲಕೃಷ್ಣಮೂರ್ತಿ, ಗೀತಕ್ಕ, ಅನ್ನಪೂರ್ಣಕ್ಕ, ಎಚ್.ಜಿ. ರಾಜಣ್ಣ, ರಜನಿಸುರೇಶ್, ಎಸ್.ವಿ. ರಂಗನಾಥಶರ್ಮ ಇದ್ದರು.
Advertisement