ಮಧುಗಿರಿ: ರಾಜ್ಯ ಅನುದಾನಿತ ನೌಕರರ ಒಕ್ಕೂಟದ ಆಶ್ರಯದಲ್ಲಿ ಆ.7ರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಶಿಕ್ಷಕರ ಸದನದಲ್ಲಿ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ ನಡೆಯಲಿದೆ.
ಶೈಕ್ಷಣಿಕ ಜಿಲ್ಲೆಯ ಅನುದಾನಿತ ಶಾಲಾ ಶಿಕ್ಷಕರು, ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ವೆಂಕಟರಾಮು ಮನವಿ ಮಾಡಿದ್ದಾರೆ.
ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸಳೆಯಲು ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ 4 ತಾಲೂಕುಗಳ ಅನುದಾನಿತ ಶಾಲೆಗಳ ಕನಿಷ್ಠ ಇಬ್ಬರು ನೌಕರರು ಭಾಗವಹಿಸುವಂತೆ ಅಧ್ಯಕ್ಷ ಎಂ. ವೆಂಕಟರಾಮು ಮತ್ತು ಪ್ರಧಾನ ಕಾರ್ಯದರ್ಶಿ ಸಚ್ಚಿದಾನಂದಮೂರ್ತಿ ಮನವಿ ಮಾಡಿದ್ದಾರೆ.
Advertisement