ಕುಣಿಗಲ್: ಉತ್ತಮ ಸಾಹಿತ್ಯ ಸಮಾಜದ ಕನ್ನಡಿಯಾಗಿದೆ. ಸಮಾಜದಲ್ಲಿ ನಡೆಯುವ ವಿದ್ಯಾಮಾನಗಳನ್ನು ಬಿಟ್ಟು ಬೇರೆ ರಚಿಸಲು ಹೋದಾಗ ಜನರಿಂದ ಸೂಕ್ತ ಬೆಂಬಲವಾಗಲಿ, ಮನ್ನಣೆಯಾಗಲಿ ದೊರೆಯುವುದಿಲ್ಲ ಎಂದು ಕಿರುತೆರೆ ಹಿರಿಯ ಕಲಾವಿದ ಹುಲಿವಾನ ಗಂಗಾಧರಯ್ಯ ಅಭಿಪ್ರಾಯಪಟ್ಟರು..
ತಾಲೂಕು ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ಸಭೆ ಹಾಗೂ ರಂಗ ಗೀತೆ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿ, ಎಲ್ಲ ಹಂತದ ಕಲಾವಿದರು, ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಲು ಬೆಳೆಸಲು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇಂದು ಕಲಾವಿದರಿಗೆ ಸೂಕ್ತ ಪೋಷಣೆ ಸಿಗದಿರುವುದು ನಿಜಕ್ಕೂ ಖೇದಕರ, ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರಗಳನ್ನು ಬಿಂಬಿಸುವ ರಂಗಭೂಮಿ ಕಲೆ ಮುಂದಿನ ತಲೆಮಾರಿಗೂ ದೊರಕಬೇಕಾದರೆ. ವಿದ್ಯಾರ್ಥಿಗಳಿಗೆ ನಾಲ್ಕು ಗೋಡೆಯ ಕೊಠಡಿ ಸಂಸ್ಕೃತಿಯನ್ನು ಬಿಟ್ಟು ವಿದ್ಯಾರ್ಥಿಗಳನ್ನು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ಸಮಾಜ ಮುಖಿಯಾಗಿ ಪರಿವರ್ತಿಸುವ ಜೊತೆಯಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರ ಉಳಿಸಬಹುದಾಗಿದೆ ಎಂದರು.
ಅಧ್ಯಕ್ಷ ಸಿದ್ದರಾಮೇಗೌಡ, ಗೌರವಾಧ್ಯಕ್ಷ ಪ್ರಸನ್ನ ಕುಮಾರ್, ಕಾರ್ಯದರ್ಶಿ ಗೋವಿಂದಪ್ಪ, ಕಸಾಪ ಅಧ್ಯಕ್ಷ ದಿನೆಶ್ ಕುಮಾರ್, ಪ್ರಮುಖರಾದ ಸಿದ್ಧಗಂಗಯ್ಯ, ವರದರಾಜು, ಮಂಜುಳಾ ದೇವಿ ಉಪಸ್ಥಿತರಿದ್ದರು. ರಂಗಕಲಾವಿದರಿಂದ ರಂಗಗೀತೆ ಗಾಯನ ಕಾರ್ಯಕ್ರಮ ನಡೆಯಿತು
Advertisement