ಕಾರ್ಯದರ್ಶಿ ಆಯ್ಕೆ

Updated on: 

ತಿಪಟೂರು: ಸಂಗೊಳ್ಳಿ ರಾಯಣ್ಣ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಲ್.ಪಿ. ಯದುನಂದನ ನೇತೃತ್ವದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ತಿಪಟೂರಿನ ಕೆ.ಎನ್. ನಟರಾಜ್ರನ್ನು ಆಯ್ಕೆ ಮಾಡಲಾಯಿತು.
ಸತ್ಯನಾರಾಯಣ ಪೂಜೆ ನಾಳೆ: ಹೆಬ್ಬೂರಿನ ಘನಪುರಿ ಜಾಗೃತಿ ವೇದಿಕೆಯಲ್ಲಿ ಜು. 13ರಂದು ಭಾನುವಾರ ಎಸ್.ವಿ. ಸಮುದಾಯ ಭವನದಲ್ಲಿ ಹೆಬ್ಬೂರಿನ ಕೋದಂಡಶ್ರಮದ ಮಾಧವಾಶ್ರಮ ಸ್ವಾಮೀಜಿ ಸಾನ್ನಿಧ್ಯದಲ್ಲಿ ಲೋಕ ಕಲ್ಯಾಣಾರ್ಥ ಸಾಮೂಹಿಕ ಸತ್ಯನಾರಾಯಣ ಪೂಜೆ  ಹಮ್ಮಿಕೊಳ್ಳಲಾಗಿದೆ.
ಪ್ರಭಾರ ಅಧ್ಯಕ್ಷರ ಆಯ್ಕೆ:  ಮಧುಗಿರಿಯ ತಾಪಂ ಪ್ರಭಾರ ಅಧ್ಯಕ್ಷರಾಗಿ ಕೆ.ಶ್ರೀನಿವಾಸರೆಡ್ಡಿ ಅಧಿಕಾರ ಸ್ವೀಕರಿಸಿದರು. 2ನೇ ಅವಧಿ ಅಧ್ಯಕ್ಷ, ಉಪಾಧ್ಯಕ್ಷ ಆಡಾಳಿತಾವಧಿ ಮುಗಿದಿದ್ದು ಮುಂದಿನ ಚುನಾವಣೆ ಘೋಷಣೆವರೆಗೆ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸರೆಡ್ಡಿ ಅಧ್ಯಕ್ಷರಾಗಿ ನೇಮಕಗೊಂಡರು. ಹಿಂದಿನ ಅಧ್ಯಕ್ಷೆ ಸುನಂದಸಿದ್ದಪ್ಪ ಅಧಿಕಾರ ಹಸ್ತಾಂತರಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ  ಯಶೋದ ರಾಜಣ್ಣ, ಸಿದ್ಧಾಗಂಗಾಂಬಿಕೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್. ರಾಜ್ ಗೋಪಾಲ್ ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com